50ನೇ ಅನುಭವ ಗೋಷ್ಠಿ ಹಾಗೂ ಹರಕೆ ಪಲ್ಲಕ್ಕಿ ಉತ್ಸವ ಡಾ.ಶಿವಶರಣಪ್ಪ ಇತ್ಲಿ ಅವರ ಸಂಸ್ಮರಣೆ

50ನೇ ಅನುಭವ ಗೋಷ್ಠಿ ಹಾಗೂ ಹರಕೆ ಪಲ್ಲಕ್ಕಿ ಉತ್ಸವ
ಡಾ.ಶಿವಶರಣಪ್ಪ ಇತ್ಲಿ ಅವರ ಸಂಸ್ಮರಣೆ

 

 

 

 

 

 

 

 

 

e-ಸುದ್ದಿ ಮಸ್ಕಿ

ನವೆಂಬರ್ 24 ಮಂಗಳವಾರ ಮೆದಕಿನಾಳ ಶ್ರೀ ಚೆನ್ನಮಲ್ಲ ಶಿವಯೋಗಿ ಅನುಭವ ಮಂಟಪದಲ್ಲಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಿಂದ ಆಯೋಜಿಸಲಾಗುತ್ತಿರುವ 50ನೇ ಅನುಭವ ಗೋಷ್ಠಿ ಹಾಗೂ ಹರಕೆ ಪಲ್ಲಕ್ಕಿ ಉತ್ಸವದ ಅಂಗವಾಗಿ
ಅಂಗೈಕ್ಯ ಡಾ. ಶ್ರೀ ಶಿವಶರಣಪ್ಪ ಇತ್ಲಿಯವರ ಸಂಸ್ಮರಣೆ ನಡೆಯಲಿದೆ ಎಂದು ಮಠದ ಪ್ರಕಾಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

 

 

 

 

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ. ಮ. ನಿ.ಪ್ರ.ಡಾ. ಚೆನ್ನಮಲ್ಲ ಮಹಾಸ್ವಾಮಿಗಳು ಹಾಗೂ ಶ್ರೀ ಸುವರ್ಣಗಿರಿ ಸಂಸ್ಥಾನದ ವಿರಕ್ತಮಠದ ಪೀಠಾಧಿಪತಿಗಳು ವಹಿಸಲಿದ್ದಾರೆ.
ಸಾಹಿತಿ ಮಹಾಂತೇಶ ಮಸ್ಕಿ ಅನುಭಾವ ನೀಡಲಿದ್ದಾರೆ.
ಸಿಂಧನೂರಿನ ಶ್ರೀ. ವಿರೇಶ ಸಾಲಿಮಠ ಅವರು ಸಂಗೀತ ಸೇವೆ ನೀಡುವರು.
ಡಾ.ಮಲ್ಲಿಕಾರ್ಜುನ ಇತ್ಲಿ, ಶ್ರಿಮತಿ ಡಾ.ತೇಜಸ್ವಿನಿ‌ ಇತ್ಲಿ ಉಪಸ್ಥಿತಿ ಇರಲಿದ್ದಾರೆ.
ಶ್ರೀಮತಿ ಗಂಗಾದೇವಿ ನಾಡಗೌಡ್ರು ಮೆದಕಿನಾಳ ಅವರು ದಾಸೋಹ ಸೇವೆ ಸಲ್ಲಿಸಲಿದ್ದಾರೆ.
ಪಂಪಯ್ಯಸ್ವಾಮಿ ಅಂತರಗಂಗಿ ಕಾರ್ಯಕ್ರಮ ನಿರೂಪಿಸುವರು.

Don`t copy text!