ಮಬ್ಬು ಮುಸುಕಿದ ಬಾನಿನ ಸಿರಿತನ

ಗಝಲ್

ಇಬ್ಬನಿಯ ಹೊದಿಕೆ ಹೊತ್ತ ಸಿರಿ ಸೊಬಗು ನೋಡಲು ಬನ್ನಿ
ಮಬ್ಬು ಮುಸುಕಿದ ಬಾನಿನ ಸಿರಿತನವನು ಹಾಡಲು ಬನ್ನಿ

ಮೈಮನ ಸೂರೆಗೊಳ್ಳುವ ಸುರ ಸುಂದರ ಚಿತ್ತಾರವಿಹುದಿಲ್ಲಿ
ಎದೆಯ ಗೂಡಿನ ಕಂಗಳನ್ನೊಮ್ಮೆ ತೆರೆದು ಕೂಡಲು ಬನ್ನಿ

ವಿಕೃತಗೊಂಡ ಹೃದಯದಲಿ ತಂಪೆರೆಯುವ ಮಾಟವಿಹುದಿಲ್ಲಿ
ಪ್ರಕೃತಿಯ ಮಮತೆ ತುಂಬಿರುವ ಮಡಿಲಲ್ಲಿ ಆಡಲು ಬನ್ನಿ

ಜೀವನದ ಜಂಜಾಟಗಳ ಬಲೆಯಿಂದ ಒಮ್ಮೆ ಹೊರಬೀಳಬಾರದೇ
ಹುದುಗಿ ಹೋಗಿಹ ಸಂತಸದ ನಿಧಿಯನ್ನು ತೋಡಲು ಬನ್ನಿ

ಹಸಿರಿನಲಿ ಉಸಿರಿನ ಜೀವದಲೆ ತೇಲುತಿದೆ ಅರಿಯಿರಿ
ಉಷೆಯು ಕರೆಯುತಿಹಳು ವನದೇವಿ ಕಡೆಗೆ ಖುಷಿ ಪಡಲು ಬನ್ನಿ

_ಉಷಾಜ್ಯೋತಿ, ಮಾನ್ವಿ

——————————–_—————————————–ಡಿಜಿಟಲ್‌ ಮಿಡಿಯಾ ಓದುಗರಿಗೆ ಪ್ರಣಾಮಗಳು,

೨೦೨೦ ಅನೇಕ ಅವಾಂತರಗಳನ್ನು ಸೃಷ್ಟಿಸಿತು. ಕರೊನಾ ಕರಿನೆರಳು ಇನ್ನು ಮಾಸುತ್ತಿಲ್ಲ. ೨೦೨೧ ರಲ್ಲಿ ಹೊಸತನಕ್ಕೆ ಹಂಬಲಿಸುವ ಮನಸ್ಸುಗಳಿಗೆ ಇನ್ನು  ಮುಂದೆ e-ಸುದ್ದಿ ಪ್ರತಿದಿನ ಕಾವ್ಯಮಯವಾಗಿಸಲು  ಕವಿತೆ, ಗಝಲ್, ಹಾಯಿಕು, ಚುಟುಕುಗಳನ್ನು ೩೬೫ ದಿನ ಪ್ರಕಟಿಸುವ ಕೈಂಕರ್ಯ ಕೈಗೆತ್ತಿಕೊಂಡಿದೆ. ಜನವರಿ ೧ ರಿಂದ ಪ್ರಸರಂಭಿಸಲಾಗಿದೆ. ಅದಕ್ಕಾಗಿ ಎಲ್ಲಾ ಕವಿಗಳು ಸ್ಪಂದಿಸುವ ಭರವಸೆ ಇದೆ. ನಿಮ್ಮ ಕವಿತೆಗಳನ್ನು ಈ ನಂ.ಗೆ ಕಳಿಸಿ.೯೪೪೮೮೦೫೦೬೭

ಸಂಪಾದಕ

ವೀರೇಶ ಸೌದ್ರಿ, ಮಸ್ಕಿ

One thought on “ಮಬ್ಬು ಮುಸುಕಿದ ಬಾನಿನ ಸಿರಿತನ

  1. ಮಬ್ಬು ಮುಸುಕಿದ ಬಾನಿನ ಸಿರಿತನದಲ್ಲಿ ಹುದುಗಿ ಹೋಗಿಹ ಸಂತಸದ ನಿಧಿಯನ್ನು ತೊಡಲು ಬನ್ನಿ ಎಂದು ಕರೆನೀಡಿರುವ ಕವಿಯಿತ್ರಿಗೆ ನಮನ.

Comments are closed.

Don`t copy text!