ಮೋಹಪುರ ಕಾದಂಬರಿ ಆಧಾರಿತ ರಂಗ ನಾಟಕ

*ಮಸ್ಕಿಯಲ್ಲಿ ಇಂದು ಮೋಹಪೂರವೆಂಬ ಕಾದಂಬರಿಯಾಧಾರಿತ ನಾಟಕ ಪ್ರದರ್ಶನ*
*ದಿನಾಂಕ- 3/1/2021
*ವಾರ- ರವಿವಾರ.
*ಸ್ಥಳ-ಗಚ್ಚಿನ ಮಠದ ಆವರಣ

ಮೋಹಪುರ ಕಾದಂಬರಿ ಆಧಾರಿತ ರಂಗ ನಾಟಕ ಅತ್ಯುತ್ತಮವಾಗಿದೆ. ಮಸ್ಕಿ ಹವ್ಯಾಸಿ ಶಿಕ್ಷಕರಿಂದ ಸುಮಾರು 50 ದಿನಗಳ ರಂಗ ತರಬೇತಿಯನ್ನು ಶ್ರೀ ರಂಜಾನ್ ಸಾಬ್ ಉಳಾಗಡ್ಡಿ ಅವರ ನಿರ್ದೇಶನದಲ್ಲಿ ಪಡೆದುಕೊಂಡಿದ್ದಾರೆ.
ಮೋಹಪೂರವೆಂಬ ಊರು ಊರಿಗೊಬ್ಬ ಗೌಡ, ಗೌಡನನ್ನೂ ಅನುಸರಿಸುವ ಬೆಂಬಲಿಗರು, ಊರಿನ ಗೌಡರಿಗೆ ಅಧಿಕಾರದ ಎಲ್ಲ ಸೌಲತ್ತುಗಳು ಸಿಕ್ಕರೂ ಮಾರುತಿ ರಾಯನ ದೇವಾಲಯದ ಅಧಿಕಾರ ಸಿಕ್ಕಿರುವುದಿಲ್ಲ. ಅಧ್ಯಕ್ಷಗಿರಿ ಆಸೆಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ.


ಮೋಹ ಪೂರವೆಂಬ ಊರು ಆಧ್ಯಾತ್ಮಿಕ ತಳಹದಿಯ, ಮೌಲ್ಯ ಸಿದ್ಧಾಂತ ಹಾಗೂ ಶ್ರೇಷ್ಠ ಆಚರಣೆಗಳನ್ನು
ಆಚರಿಸುವ ಕುಟುಂಬಗಳನ್ನು ಹೊಂದಿದ ಊರಾಗಿದೆ. ರಾಮಾಚಾರ್ಯರು ದೇವಸ್ಥಾನದ ಅಧ್ಯಕ್ಷತೆಯನ್ನು ನ್ಯಾಯಯುತವಾಗಿ ನಿಭಾಯಿಸುತ್ತಾರೆ, ಆದರೆ ರಾಜಕೀಯ ಚದುರಂಗದಾಟದಲ್ಲಿ ಸ್ಪರ್ಧಿಸಲು ಅಸಾಧ್ಯವಾಗಿ ಅಧ್ಯಕ್ಷಗಿರಿ ಅಧಿಕಾರವನ್ನು ಬಸವಂತ ರೆಡ್ಡಿಗೆ ಕೊಟ್ಟುಬಿಡುತ್ತಾರೆ. ಆದರೆ ನೈತಿಕ ಮಾರ್ಗ ಶ್ರೇಷ್ಠ ಆಚರಣೆಗಳು ಶಾಶ್ವತವಾಗಿ ಬೆಲೆ ಕೊಡುತ್ತವೆ ಎಂಬುದು ಪಾತ್ರದ ಆಶಯವಾಗಿದೆ.


ವೇದ ಶ್ಲೋಕ ಅಧ್ಯಯನದ ನಂತರವೂ ಊರಿನಲ್ಲಿ ನಿರುದ್ಯೋಗದಿಂದ ಬಳಲಿದ ಕೇಶವಾನಂದ ನಗರಕ್ಕೆ ಹೋಗಿ ವ್ಯಕ್ತಿತ್ವದಲ್ಲಿ ಆಕರ್ಷಕ ಬದಲಾವಣೆಯನ್ನು ಮಾಡಿಕೊಂಡು ಸ್ವಂತ ಊರಲ್ಲಿ ಬದ್ರರಾಮನ ಗುಡಿಕಟ್ಟಿ ಮೋಹಪುರ ಜನರಿಗೆ ಭರವಸೆಯ ಬೆಳಕಾಗುತ್ತಾನೆ,ಅದು ಕೆಲವರಿಗೆ ದಾರಿದೀಪ ಎನಿಸಿದರೆ ಅದು ಕೆಲವರಿಗೆ ಕಣ್ಣು ಕುಕ್ಕಿಸುವಂತೆ ಮಾಡುತ್ತದೆ.
ರಾಮಾಚಾರಿ ಅನುಯಾಯಿ ನಗಾರಿ ನಾಗ್ಯಾ ಶುದ್ರ ನಾದರೂ ಮಾರುತಿ ರಾಯನ ದೇವಾಲಯದಲ್ಲಿ ನಗಾರಿ ಬಾರಿಸಿ ತನ್ನ ಸಂಸಾರವನ್ನು ಸುಸ್ಥಿತಿಗೆ ತರಬೇಕು ಎಂಬ ಬಲವಾದ ಹಂಬಲದಿಂದ ಪ್ರಚಿನ ಜೊತೆ ನಗಾರಿ ಬಾರಿಸುತ್ತಲೇ ತನ್ನ ಹೋರಾಟದ ಮೂಲಕ ಗಮನ ಸೆಳೆಯುತ್ತಾನೆ.
ನಾಟಕದಲ್ಲಿ ಶ್ರೀನಿವಾಸ್ ಪಟೇಲ್ ರೆಡ್ಡಿಯ ಬೆಂಬಲಿಗನಾಗಿ ಹಣ ಅಂತಸ್ತಿನಿಂದಲೇ ಅಡ್ಡ ಬಂದವರನ್ನು ತುಳಿದು ಹಾಕುವ ಕಿಂಗ್ ಮೇಕರ್ ಪಾತ್ರದಲ್ಲಿ ಕಾಣಿಸುತ್ತಾನೆ.


ನಾಗ್ಯನ ಮಗನಾದ ಆಂಜನೇಯ ಅಪ್ಪನ ಶ್ರಮದ ಬೆವರನ್ನು ಅರಿತು ಉತ್ತಮವಾಗಿ ಓದಿ ಸ್ವಂತ ಊರಿಗೆ ಹೋಗಿ ಬರುವುದು ಅವನ ಹೋರಾಟ ಮನೋಭಾವವನ್ನು ತೋರಿಸುತ್ತದೆ. ಕಥಾ ನಿರೂಪಕಿಯಾಗಿ ಅಕ್ಕಮ್ಮ ಕಥಾವಸ್ತುವನ್ನು ನಿರೂಪಿಸುತ್ತಾ ನಾಟಕವನ್ನು ರಂಗದ ಮೇಲೆ ಜೀವಂತಿಕೆ ಇರುಯಂತೆ ಮಾಡುತ್ತಾಳೆ. ನಿಜಾಂ ಪಾತ್ರದಲ್ಲಿ ಅಭಿನಯಿಸಿದ ಕುಮಾರಿ ನಿವೇದಿತಾ ಅಧಿಕಾರದ ಆಸೆಗಾಗಿ ಅಜೀರ್ಣತೆ ರೋಗದಿಂದ ಬಳಲುವ ಸನ್ನಿವೇಶ ಆಕರ್ಷಕವಾಗಿದೆ. ಮೋಹ ಪೂರವೆಂಬ ಕಾದಂಬರಿಯಾಧಾರಿತ ನಾಟಕವು ಭಕ್ತಿ ಸಂಸ್ಕೃತಿಯ ಆಚರಣೆ , ರಾಜಕೀಯ ಚದುರಂಗದಾಟ ನಡುವೆಯೂ ರೈತ ಹಾಗೂ ಶ್ರಮಿಕ ವರ್ಗ ಬದುಕಿನ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತದೆ. ಅದರಲ್ಲಿ ಗೆಲ್ಲುವ ಮೂಲಕ ಶ್ರಮಿಕತೆಗೆ
ಕೊನೆಯದಾಗಿ ಬೆಲೆ ಸಿಕ್ಕೇ ಸಿಗುತ್ತದೆ ಎಂಬುದನ್ನು ತೋರಿಸುತ್ತದೆ.

-ಮಹೇಶ್, ಶಿಕ್ಷಕರು, ಮಸ್ಕಿ
———————————————————————

ಮೋಹಪುರ ನಾಟಕದಲ್ಲಿ ರಾಮಾಚಾರಿಯಾಗಿ ಶ್ರೀ ಮಹೇಶ್, ಬಸವಂತ ರೆಡ್ಡಿಯಾಗಿ ಶ್ರೀಪಂಪಾಪತಿ, ಕೇಶವ ನಂದರಾಗಿ ಶ್ರೀ ಅರುಣ್ ಕುಮಾರ್, ನಗಾರಿ ನಾಗ್ಯಪಾತ್ರದಲ್ಲಿ ಶ್ರೀ ಮೋಹನ್, ಶ್ರೀನಿವಾಸ್ ಪಟೇಲ್ ರಾಗಿ ಬಾಬುರಾವ್, ಪಿಡಿಒ ಆಗಿ ಶ್ರೀ ವೀರಪ್ಪ, ಹನುಮನಾಗಿ ಕುಮಾರ್, ಗೌಡಶ್ಯಾನೀ ಪಾತ್ರದಲ್ಲಿ ಅಕ್ಕಮಾದೇವಿ, ನಿಜಾಮ ಪಾತ್ರದಲ್ಲಿ ಕುಮಾರಿ ನಿವೇದಿತಾ ಅಭಿನಯಿಸಿದ್ದಾರೆ.ರಂಗ ಸಜ್ಜಿಕೆಯನ್ನು ಶ್ರೀ ಗಿರಿಧರ್, ಕುಮಾರ್ ನಿರ್ವಹಿಸಿದ್ದಾರೆ. ಸಂಗೀತವನ್ನು ಮಧುಸೂದನ್. ಮಾತ್ರ ವಿನ್ಯಾಸವನ್ನು ಶ್ರೀ ನರಸಿಂಹಲು ನಿರ್ವಹಿಸಿದ್ದಾರೆ.

_——————————————_—————————–

ವಿಶೇಷ ಲೇಖನ, ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏

Don`t copy text!