e-ಸುದ್ದಿ, ಮಸ್ಕಿ
ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಜ.1ರಿಂದ ಆರಂಭವಾದ ಶಾಲೆಯ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್‍ನ್ನು ಶನಿವಾರ ವಿತರಣೆ ಮಾಡಿದರು.
ಸದಸ್ಯರಾದ ಚಂದ್ರುಗೌಡ, ಲಿಂಗಮ್ಮ ಮಲ್ಲಣ್ಣ ಜುಮಲಾಪೂರ ಇವರು ಗುಡದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಮಾಸ್ಕ್‍ಗಳನ್ನು ವಿತರಣೆ ಮಾಡಿದರು. ಶಾಲೆಗೆ ಆಗಮಿಸಿದ ಪ್ರತಿ ವಿದ್ಯಾರ್ಥಿಗಳಿಗೂ ಸ್ಯಾನಿಟೈಸರ್ ಡಬ್ಬಿಗಳನ್ನು ನೀಡಿ ಕರೊನಾ ರೋಗಾಣು ಹರಡದಂತೆ ಸುರಕ್ಷತೆ ಕಾಪಾಡಿಕೊಳ್ಳಲು ತಿಳಿ ಹೇಳಿದರು.
ಗ್ರಾ.ಪಂ.ಸದಸ್ಯ ಚಂದ್ರುಗೌಡ ಮಾತನಾಡಿ ಕರೊನಾ ಮಹಾಮಾರಿಯಿಂದ ಶೈಕ್ಷಣಿಕ ಪ್ರಗತಿಗೆ ಕುಂಠಿತವಾಗಿತ್ತು. ಇನ್ಮುಂದೆ ಶಾಲೆಗಳು ಆರಂಭದಿಂದ ಮಕ್ಕಳಿಗೆ ಶಿಕ್ಷಣ ದೊರೆಯಲಿದೆ. ಶಿಕ್ಷಕರು ನಿರ್ಲಕ್ಷ್ಯ ವಹಿಸದೇ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದರು.
ಶಾಲೆ ಮುಖ್ಯ ಶಿಕ್ಷಕಿ ನೇತ್ರಾವತಿ ಹಿರೇಮಠ, ಶಿಕ್ಷಕರಾದ ರಜಾಕ್, ಲಕ್ಷ್ಮಣ, ರೂಪಾ, ದೀಪಾ, ಗೀತಾ, ಸಿದ್ರಾಮೇಶ ಪಾಲಕ ಬಸವರಾಜ ಜುಮಲಾಪೂರ ಇದ್ದರು.