ಸಂಕ್ರಮಣ ಕಾಲ 

ಸಂಕ್ರಮಣ ಕಾಲ 

 

ಸುಗ್ಗಿ ಬಂದಿಹುದಹುದು

ಹಿಗ್ಗೇನು ಇಲ್ಲ

ಬೆಳೆದ ರೈತನ ಗೋಳು

ಕೇಳುವವರಾರಿಲ್ಲ

 

ಈ ಹಿಂದಿನಂತೆ

ತೆನೆ ಮುರಿಯುವವರಿಲ್ಲ

ರಾಶಿಮಾಡುವವರಿಲ್ಲ

ಹಂತಿಯ ಪದಗಳ್ಯಾವೂ

ಕೇಳುವುದೇ ಇಲ್ಲ

 

ತಲೆತುಂಬ ಕಾಶ್ಮೀರ

ಪಾಪಿಸ್ತಾನ, ಪೌರತ್ವ, ವೈರತ್ವ

ಯುವಕರೆಲ್ಲ ಸಾಮಾಜಿಕವಲ್ಲದ

ಜಾಲತಾಣಗಳಲಿ ಬಂಧಿ

ಅವರಿಗೆಲ್ಲಿದೆ ಸುಗ್ಗಿ ?

 

ಸೂರ್ಯ ಬಂದ

ಪಥವ ಬದಲಿಸಿದ

ಮರ್ಮವರಿಯದೆ

ನಾವಿಟ್ಟಿರುವ ಹೆಸರು ಸುಗ್ಗಿ

ಹಿಗ್ಗಿದೆಯಾ ? ನೀವೇ ಹೇಳಿ.

 

✍️ ಆದಪ್ಪ ಹೆಂಬಾ ಮಸ್ಕಿ

Don`t copy text!