ಪ್ರಜೆಗಳು
ದೊಡ್ಡ ಬಂಗಲೆ
ಮಜಲು ಕಟ್ಟಿ
ಗುಡಿಸಲಲ್ಲಿ
ಬಾಳುವವರು
ರಸ್ತೆ ನಿರ್ಮಿಸಿ
ಹೊಗೆಯ ನುಂಗಿ
ಕಾಡು ಮುಳ್ಳು
ತುಳಿದರು .
ಕೆರೆ ಭಾವಿ
ಭೂಮಿ ಅಗೆದು
ಬಾಯಾರಿ
ಮರುಗುವವರು
ಸುಗ್ಗಿ ಮಾಡಿ
ಧಾನ್ಯ ಒಕ್ಕಿ
ಹಸಿವಿನಿಂದ
ಬಳಲಿದವರು .
ಬಟ್ಟೆ ನೇಯ್ದು
ಹೊಲಿಗೆ ಹಾಕಿ
ಬೆತ್ತಲಾಗಿ
ಬದುಕುವವರು
ಕರಿಯ ಕಂಬಳಿ
ಕೋಟು ಮಾಡಿ
ಚಳಿಯಲ್ಲಿ
ನಲಗುವವರು
ಐದು ವರುಷಕೆ
ಮತವ ಹಾಕಿ
ಬಾಯಿ ಬಿಡದ
ಮೂಕರು
ನನ್ನ ದೇಶದ
ಪ್ರಜೆಗಳು
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*