ಹೆಣ್ಣು ಹೇಗಿರಬೇಕು?
ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುವರು ।ವಾದ ಮಾಡಿದರೆ ವಾಚಾಳಿ ಎನ್ನುವರು ।
ನಗು ನಗುತಾ ಇದ್ದರೆ ನಂಬ ಬೇಡಿ ಎನ್ನುವರು ।
ಅತ್ತರೆ ಊರು ಹಾಳುಮಾಡುವವಳು ಎನ್ನುವರು ।ಹೊಂದಿಕೊಂಡು ಹೋದರೆ ನಾಟಕವಾಡುವವಳು ಎನ್ನುವರು ।ಹೊಂದದಿದ್ದರೆ ಮನೆಹಾಳಿ ಎನ್ನುವರು ।ಬಾಯಿಮಾಡಿದರೆ ಜಗಳಗಂಟಿ ಎನ್ನುವರು ।ನಿಧಾನವಾಗಿ ಮಾತನಾಡಿದರೆ ಉಸುರಿಲ್ಲದವಳು ಎನ್ನುವರು ।ಒಬ್ಬಳೇ ಕೆಲಸ ಮಾಡಿದರೆ ಯಾರನ್ನೂ ಕರೆಯುವುದಿಲ್ಲ ಎನ್ನುವರು ।ಕೆಲಸಕ್ಕೆ ಕರೆದರೆ ಸರಿಗಟ್ಟುವವಳು ಎನ್ನುವರು ।ಕೇಳಿ ಮಾಡಿದರೆ ಏನೂ ಗೊತ್ತಿಲ್ಲ ಎನ್ನುವರು ।ಕೇಳದೇ ಮಾಡಿದರೆ ಕಾರುಬಾರು ನಡೆಸುವವಳು ಎನ್ನುವರು ।ಸಿಂಪಲ್ಲಾಗಿದ್ದರೆ ಅಂದವಿಲ್ಲ ಎನ್ನುವರು ।ಸಿಂಗರಿಸಿಕೊಂಡರೆ ಆಡಂಬರದವಳು ಎನ್ನುವರು ।ಮನತನದ ಕಾಳಜಿ ಮಾಡಿದರೆ ಇವಳೊಬ್ಬಳಿಗಿದೆಯೋ ಎನ್ನುವರು ।ಕಾಳಜಿ ಮಾಡದಿದ್ದರೆ ನಿರ್ಲಕ್ಷ್ಯದವಳು ಎನ್ನುವರು ।ವೃತ ಪೂಜೆ ಮಾಡಿದರೆ ಗೌರಮ್ಮ ಎನ್ನುವರು ।ಏನೂ ಮಾಡದಿದ್ದರೆ ಸಂಸ್ಕೃತಿ ಇಲ್ಲದವಳು ಎನ್ನುವರು ।।ಹೆಣ್ಣನ್ನು ಹೇಗಿದ್ದರೆ ಹೊಗಳುವರು ।ಹೇಗಿದ್ದರೆ ಇಷ್ಟ ಪಡುವರು?।।
ಹೆಣ್ಣಿನಿಂ ಹಗೆತನವು ।ಹೆಣ್ಣಿನಿಂ ಒಡೆತನವು ಹೆಣ್ಣಿನಿಂದಲೇ ಸಕಲ ಸಂಪದವು ಜಗಕೆಲ್ಲಾ ಹೆಣ್ಣೇ ಸರ್ವಸ್ವ ।।
ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ।।
–ಅನಾಮಿಕ