e-ಸುದ್ದಿ, ಮಸ್ಕಿ
ಪಟ್ಟಣದ ಮುದಗಲ್‍ಗೆ ಹೋಗುವ ಮಾರ್ಗದ ಹತ್ತಿರ ಅಶೋಕ ಸರ್ಕಲ್ ನಲ್ಲಿರುವ ಅಶೋಕ ಶಿಲಾಶಸನದ ಮಹತ್ವ ಹಾಗೂ ಸ್ಥಳ ಗುರುತು ತೊರಿಸುವ ನಾಮಫಲಕವನ್ನು ತೆರವುಗೊಳಿಸಲು ಪುರಸಭೆ ಸಿಬ್ಬಂದಿ ಮುಂದಾದ ಘಟನೆ ಸೋಮವಾರ ಜರುಗಿದೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಯಾವ ಕಾರಣಕ್ಕಾಗಿ ನಾಮಫಲಕ ತೆರವು ಮಾಡುತ್ತಿದ್ದೀರಿ ಎಂದು ಪುರಸಭೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ನಮ್ಮ ಅಧಿಕಾರಿಗಳು ಕಿತ್ತಲು ಹೇಳಿದ್ದಾರೆ. ಅದರಂತೆ ನಾವು ಕಿತ್ತುತ್ತೀದ್ದೇವೆ ಎಂದು ಸಿಬ್ಬಂದಿ ಹೇಳಿದಾಗ ಸಾರ್ವಜನಿಕರು ಕಿತ್ತದಂತೆ ತಡೆ ಹಿಡಿದಿದ್ದಾರೆ.
ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸ್ಥಳಕ್ಕೆ ಆಗಮಿಸಿ ನಾಮಫಳಕ ಶಿಥಿಲವಾಗಿದೆ. ಅದನ್ನು ತೆರವು ಗೊಳಿಸಲು ಪುರಾತತ್ವ ಇಲಾಖೆ ಆದೇಶ ವಿದೆ ಎಂದರು. ಸ್ಥಳದಲ್ಲಿದ್ದ ಸಾರ್ವಜನಿಕರು ಆದೇಶ ಪ್ರತಿ ನೀಡಿ ಎಂದು ಪಟ್ಟು ಹಿಡಿದರು.
ಆಗ ರೈತ ಸಂಘದ ತಾಯಪ್ಪ ಮುಖ್ಯಾಧಿಕಾರಿಗೆ ತರಾಟೆಗೆ ತೆಗೆದುಕೊಂಡು ಪ್ರಸಿದ್ಧವಾದ ಅಶೋಕನ ಶಿಲಾಶಾಸನ ತೊರಿಸುವ ನಾಮಫಲಕ ಇದಾಗಿದ್ದು, ಇದೇ ಸ್ಥಳದಲ್ಲಿ ಬೇರೊಂದು ಹೊಸ ನಾಮಫಲಕ ಹಾಕಿ ಆಗ ಹಳೆಯ ನಾಮಫಲಕ ತೆಗೆಯಿರಿ ಎಂದು ಪಟ್ಟು ಹಿಡಿದು ಹಿರಿಯ ಅಧಿಕಾರಿ ಎಸಿ ರಾಜಶೇಖರ ಡಂಬಳ ಅವರಿಗೆ ದೂರುವಾಣಿಯಲ್ಲಿ ದೂರು ನೀಡಿದ್ದಾರೆ.
ಎಸಿ ದೂರು ನೀಡುತ್ತಿದ್ದಂತೆಯೇ ಹೊಸ ನಾಮಫಲಕ ಅಳವಡಿಸಲಾಗುವದು ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ಸಾರ್ವಜನಿಕರಿಗೆ ಸ್ಪಷ್ಟಪಡಿಸಿದ್ದಾರೆ. ಅಷ್ಟೊತ್ತಿಗಾಗಲೇ ಮಾತಿನ ಚಕಮಕಿಯಲ್ಲಿ ನಾಮಫಲಕವನ್ನು ಪುರಸಭೆ ಸಿಬ್ಬಂದಿ ಕೆಳಗೆ ಉರುಳಿಸಿದ್ದರು. ಸಾರ್ವಜನಿಕರು, ಯುವಕರು ಮತ್ತೆ ನಾಮಫಲಕ ಇದ್ದ ಸ್ಥಳದಲ್ಲಿ ನೆಟ್ಟು ಯಥಾಸ್ಥಿತಿಯಲ್ಲಿ ಇರಿಸಿದ್ದಾರೆ.
ಕಾರಮತ್ತುಃ ಈಗಿರುವ ನಾಮಫಲಕ ಹಿಂದೆ ಅಂಗಡಿ ಮುಂಗಟ್ಟು ಇದ್ದು ನಾಮಫಲಕ ಇದ್ದರೆ ಅಂಗಡಿ ಕಾಣಿಸುವುದಿಲ್ಲ ಎಂದು ಪುರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳ ಮನ ಒಲಿಸಿ ತೆರವು ಕಾರ್ಯಚರಣೆಗೆ ಇಳಿದಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಾರ್ವಜನಿಕರಿಂದ ಪ್ರತಿರೋಧ ಬಂದ ಹಿನ್ನಲೆಯಲ್ಲಿ ಪುರಸಭೆ ಸಿಬ್ಬಂದಿ ಕಾಲಕಿತ್ತಿದರು. ಯುವಕರ ಸಹಾಯದಿಂದ ಪುನಃ ನಾಮಫಲಕ ಮೊದಲಿದ್ದ ಜಾಗದಲ್ಲಿ ಸ್ಥಾಪಿಸಲಾಯಿತು ಎಂದು ರೈತ ಸಂಘದ ಅಧ್ಯಕ್ಷ ತಾಯಪ್ಪ ಹೇಳಿದರು.
————
ಪುರಾತತ್ವ ಇಲಾಖೆಯಿಂದ ಅಶೋಕ ವೃತ್ತದ ಬಳಿ ಇರುವ ನಾಮಫಲಕ ತೆರವು ಮಾಡುವಂತೆ ಪತ್ರ ಬಂದಿದ್ದರಿಂದ ನಾವು ತೆರವು ಮಾಡಲು ಹೋಗಿದ್ದೇವು. ಆದರೆ ಸ್ಥಳಿಯರು ವಿರೋಧ ವ್ಯಕ್ತಪಡಿಸಿದ ಕಾರಣ ನಾಮಫಲಕ ಪುನರ್ ನಿರ್ಮಾಣ ಮಾಡಲಾಗಿದೆ.
-ಹನುಮಂತಮ್ಮ ನಾಯಕ, ಮುಖ್ಯಾಧಿಕಾರಿ ಪುರಸಭೆ ಮಸ್ಕಿ