23 ವಾರ್ಡ್ ಗಳಲ್ಲಿ‌‌ ಮುಂಜಾಗೃತ ಕ್ರಮ

23 ವಾರ್ಡ್ ಗಳಲ್ಲಿ‌‌ ಮುಂಜಾಗೃತ ಕ್ರಮ

e-ಸುದ್ದಿ, ಮಸ್ಕಿ

ಮಸ್ಕಿ : ಪಟ್ಟಣದಲ್ಲಿ ಕೊರೊನಾ ಸೊಂಕು‌ ದಿ‌ನದಿಂದ ದಿನಕ್ಕೆ ಹೆಚ್ವಳವಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕಾರ ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಮನವಿ‌ ಮಾಡಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ‘ಈಗಾಗಲೇ ಮಸ್ಕಿಯಲ್ಲಿ ಕೊವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ‌. ಸೋಂಕಿತರು ಅಲ್ಲಿಗೆ ಹೋಗಲು ಒಪ್ಪುತ್ತಿಲ್ಲ‌. ಕೊರೊನಾ ವಾರಿಯರ್ಸ್ ಗಳಾದ ತಾವುಗಳು ಕೊರೊನಾ ಬಗ್ಗೆ ಇರುವ ಆತಂಕವನ್ನು ದೂರ ಮಾಡಿ ಅವರನ್ನು ಕೊವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಸಹಕಾರ ನೀಡಬೇಕು ಎಂದರು.
ಪಟ್ಟಣದಲ್ಲಿ ತರಕಾರಿ ಮಾರಾಟಗಾರರಿಗೆ ಸೂಕ್ತ ಸ್ಥಳ ನಿಗದಿ ಮಾಡುವಂತೆ ಕೆಲ ಸದಸ್ಯರು ಸಭೆಯಲ್ಲಿ ಸೂಚಿಸಿದರು.
ಪುರಸಭೆ ಉಪಾಧ್ಯಕ್ಷೆ ಕವಿತಾ ಎಂ. ಮಾಟೂರು, ಪುರಸಭೆ ಸದಸ್ಯರು, ಪುರಸಭೆ ಮ್ಯಾನೇಜರ ಸತ್ಯನಾರಾಯಣ, ನಾಗರಾಜ, ಜಗದೀಶ ಸೇರಿದಂತೆ ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.

Don`t copy text!