e-ಸುದ್ದಿ, ಮಸ್ಕಿ
ಕರೊನಾ ಎರಡನೇ ಅಲೆಗೆ ಬಡವರು, ದಿನಗೂಲಿಗಳು ಖಾಸಗಿ ಶಾಲೆಗಳ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಣ್ಣರೊಸುವ ಕೆಲಸದಲ್ಲಿ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು ಭಾನುವಾರ ಇದಕ್ಕೆ ಸಾಕ್ಷಿಯಾಯಿತು.
ಬೆಳಿಗ್ಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಯುವಕರ ತಂಡದೊಂದಿಗೆ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿ 7 ವರ್ಷದ ಆಡಳಿತ ನಡೆಸಿದ ಪ್ರಯುಕ್ತ ಮೊರಾರ್ಜಿ ಶಾಲೆಯಲ್ಲಿರುವ ಕರೊನಾ ಸೋಂಕಿತರಿಗೆ ಹಣ್ಣುಗಳನ್ನು ವಿತರಿಸಿ ಬೇಗ ಗುಣಮುಖರಾಗಿ ಎಂದು ಹಾರೈಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು. ಕರೊನಾ ಸೋಂಕಿತರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಕಲ್ಪಿಸುವಂತೆ ವೈದ್ಯರಿಗೆ ತಿಳಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನಾಥ ಮಕ್ಕಳ ಭವಿಷ್ಯ ಕಟ್ಟುವ ಬಾಲ ಸೇವಾ ಯೋಜನೆ ಜಾರಿಗೊಳಿಸಿರುವದಕ್ಕೆ ಮುಖ್ಯಮಂತ್ರಿಗಳನ್ನು ಪ್ರತಾಪಗೌಡ ಪಾಟೀಲ ಅಭಿನಂದಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ಶರಣಬಸವ ವಕೀಲ, ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ನಗರ ಘಟಕದ ಅಧ್ಯಕ್ಷ ನಾಗರಾಜ ಯಂಬಲದ, ಚೇತನ ಪಾಟೀಲ, ಶರಣಯ್ಯ ಗುಡದೂರು, ಶರಣಬಸವ ಹರವಿ ಹಾಗೂ ಇತರರು ಇದ್ದರು.
ಅಕ್ಷಾಂಬರ ಸಂಸ್ಥೆಯಿಂದ ವಿತರಣೆ ಃ ಪಟ್ಟಣದ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರ ಸಂಘದಿಂದ 100 ಆಹಾರ ಕಿಟ್‍ಗಳನ್ನು ಬಡವರಿಗೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ವಿತರಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಅಕ್ಷಾಂಬರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಸೂಗಣ್ಣ ಬಾಳೆಕಾಯಿ ಹಾಗೂ ಇತರರು ಇದ್ದರು.
ಲಯನ್ಸ್ ಕ್ಲಬ್ ನಿಂದ ವಿತರಣೆ ಃ ಪಟ್ಟಣದ ಲಯನ್ಸ್ ಕ್ಲಬ್ ನಿಂದ ಬಡವರಿಗೆ ಅನಾಥರಿಗೆ 100 ಕ್ಕೂ ಹೆಚ್ಚು ಆಹಾರದ ಕಿಟ್‍ಗಳನ್ನು ವಿತರಿಸಿದರು. ಲಯನ್ಸ್ ಕ್ಲಬ್‍ನ ಸದಸ್ಯರಾದ ಡಾ.ಮಲ್ಲಿಕಾರ್ಜುನ ಇತ್ಲಿ, ಶಿವರಾಜ ಇತ್ಲಿ, ಬಸವಲಿಂಗ ಶಟ್ಟಿ, ದಂತ ವೈದ್ಯ ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.
ಅಭಿನಂದನ್ ಶಿಕ್ಷಣ ಸಂಸ್ಥೆ ಃ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿ ವೃದ್ದಿ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ ಮತ್ತು ಅವರ ತಂಡದವರು ಬಡವರನ್ನು ಗುರುತಿಸಿ ದಾನಿಗಳಿಂದ ಧವಸ ಧಾನ್ಯ ಸಂಗ್ರಹಿಸಿ ವಿತರಿಸಿದರು.