ಮಂಜುಳಾ ಪ್ರಭುಲಿಂಗಯ್ಯ ಬನ್ನಿಗೋಳಮಠ ನೇಮಕ

ಮಂಜುಳಾ ಪ್ರಭುಲಿಂಗಯ್ಯ ಬನ್ನಿಗೋಳಮಠ ನೇಮಕ

e-ಸುದ್ದಿ, ಇಲಕಲ್ಲ

ಸಿದ್ದೇಶ್ವರ  ಸಾಹಿತ್ಯ ವೇದಿಕೆ ಇಲಕಲ್ಲ ತಾಲೂಕು ಅಧ್ಯಕ್ಷೆಯಾಗಿ ಮಂಜುಳಾ ಪ್ರಭುಲಿಂಗಯ್ಯ ಬನ್ನಿಗೋಳಮಠ ಅವರು ನೇಮಕವಾಗಿದ್ದಾರೆ.

ವಿಜಯಪುರದ ಸಿದ್ದೇಶ್ವರ ಸಾಹಿತ್ಯ ವೇದಿಕೆ ರಾಜ್ಯ ಮಟ್ಟದ ಸಾಹಿತ್ಯ ಸಂಘಟನೆಯಾಗಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಘಟನೆ ಮಾಡುತ್ತಿದೆ.

ಇಲಕಲ್ಲ ತಾಲೂಕು ಅಧ್ಯಕ್ಷರಾಗಿ ಮಂಜುಳಾ ಪ್ರಭುಲಿಂಗಯ್ಯ ಬನ್ನಿಗೋಳಮಠ ಅವರು ನೇಮಕವಾಗಿದ್ದಾರೆ

ಬಿ. ಎ., ಬಿ. ಇಡಿ. ಪದವಿಧರರಾದ ಬನ್ನಿಗೋಳಮಠ ಅವರು

ಸಾಹಿತ್ಯ, ಕಥೆ, ಕವನ ಬರೆಯುವದು, ವಚನ ವಿಶ್ಲೇಷಣೆ ಮಾಡುವದು, ಹಾಡುವದು, ಯೋಗ, ರೇಕಿ, ಆಧ್ಯಾತ್ಮ, ಮಹಿಳಾ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯ ಸಂಘಟನೆಯ ಅಧ್ಯಕ್ಷೆ ಗಿರಿಜಾ ಪಾಟೀಲ ಬನ್ನಿಗೊಳಮಠ ಅವರನ್ನು ನೇಮಿಸಿದ್ದು ಇಲಕಲ್ಲ ತಾಲೂಕಿನ‌ ಸಾಹಿತಿಗಳು ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಕ್ರಿಯವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಲಿ ಎಂದು ಸದಾಶಯ ವ್ಯಕ್ತಪಡಿಸಿದ್ದಾರೆ.

 

Don`t copy text!