ರಾಘವೇಂದ್ರ ನಾಯಕ ಜೆಡಿಎಸ್‍ಗೆ ಸೇರ್ಪಡೆ

e-ಸುದ್ದಿ, ಮಸ್ಕಿ

ಮಸ್ಕಿ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಮಸ್ಕಿ ಕ್ಷೇತ್ರದಲ್ಲಿ ಪಕ್ಷದಿಂದ ಪಕ್ಷಕ್ಕೆ ವಲಸೆ ಆರಂಭವಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನ ಟಿಕೇಟ್‍ಗೆ ಪೈಪೆÇೀಟಿ ನಡೆಸಿದ್ದ ಪಟ್ಟಣದ ನಿವಾಸಿ ರಾಘವೇಂದ್ರ ನಾಯಕ ಬಳಗಾನೂರು ಗುರುವಾರ ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಸತತ ಮೂರು ಚುನಾವಣೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರೊಂದಿಗೆ ಗುರುತಿಸಿಕೊಂಡಿದ್ದ ರಾಘವೇಂದ್ರ ನಾಯಕ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಂದರ್ಭದಲ್ಲಿ ಕಾಂಗ್ರೆಸ್‍ನಲ್ಲಿ ಉಳಿದುಕೊಂಡಿದ್ದರು. ಇತ್ತಿಚಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿ ಕೊನೆಗೆ ಟಿಕೇಟ್ ಕೈತಪ್ಪುವ ಮುನ್ಸೂಚನೆ ದೊರೆತ ಹಿನ್ನೆಯಲ್ಲಿ ಉಪಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಉಪಚುನವಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದೇ ಮಾಡುವುದಾಗಿ ಹೇಳಿಕೊಂಡಿದ್ದರು.
ಆದರೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಸ್ಕಿ ಕ್ಷೇತ್ರದಿಂದ ಕಣಕ್ಕಿಳಿಸುವುದಿಲ್ಲವೆಂದು ಜೆಡಿಎಸ್ ಪಕ್ಷವೇ ಸ್ಪಷ್ಟ ಪಡಿಸಿತ್ತು. ಇದರಿಂದ ಉಪಚುನವಾವಣೆ ಮುಗಿಯುವವರೆಗೆ ತಟಸ್ಥರಾಗಿದ್ದ ರಾಘವೇಂದ್ರ ನಾಯಕ ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳುವ ಮೂಲಕ ಜೆಡಿಎಸ್ ಸಂಘಟನೆ ಜೀವ ಬಂದಂತಾಗಿದೆ.
ಜಿಪಂ.ತಾಪಂ. ಚುನಾವಣೆ ಸಿದ್ಧತೆ: ಇತ್ತಿಚಿಗೆ ನಡೆದ ಉಪಚುನಾವಣೆಯಲ್ಲಿ ತಟಸ್ಥವಾಗಿದ್ದ ಜೆಡಿಎಸ್ ಇದೀಗ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಪಕ್ಷವೂ ಕೂಡ ಎಲ್ಲಾ ಜಿಪಂ ಹಾಗೂ ತಾಪಂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೆರೆಮರೆಯಲ್ಲಿ ಎಲ್ಲಾ ರೀತಿಯ ಕಸರತ್ತುಗಳನ್ನು ನಡೆಸಿದ್ದು, ಅದರ ಭಾಗವಾಗಿ ಮುಖಂಡರು ಹಾಗೂ ಕಾರ್ಯರ್ಕತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದೆ.
ಜೆಡಿಎಸ್ ಮಸ್ಕಿ ತಾಲೂಕು ಅಧ್ಯಕ್ಷ ಅಮರೇಶ ಹಂಚಿನಾಳ, ಬೀಮಣ್ಣ ಪತ್ತಾರ್, ಚನ್ನಪ್ಪ ಮಾಳ್ಗಿ, ಹನುಮೇಶ ಕಣ್ಣೂರು, ರಫಿ ಬಳಗಾನೂರು, ಜಿಂದಾಸಾಬ್ ಗುಂಜಳ್ಳಿ ಸೇರಿದಂತೆ ಇತರರು ಇದ್ದರು.

Don`t copy text!