ಕುಡಿಯುವ ನೀರಿನ ಕೆರೆ ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಚಾಮರಾಜ ಪಾಟೀಲ್
e-ಸುದ್ದಿ, ಲಿಂಗಸುಗೂರು
ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೋಬಳಿಯ ಯಲಗಟ್ಟಾ ಹಾಗೂ ಇತರ 11 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕುಡಿಯುವ ನೀರಿನ ಕೆರೆ ನಿರ್ಮಿಸಲು ಖಾಸಗಿ ಮಾಲಿಕರ ಜಮೀನು ಖರೀದಿಸುವ ಸಂಬಂಧ ಲಿಂಗಸೂಗುರಿನ ತಹಶೀಲ್ದಾರ ಚಾಮರಾಜ ಪಾಟೀಲ ಅವರು ಯಲಗಟ್ಟಾ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಿಗೆ ಜಮೀನಿನ ಮಾಲಿಕರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು .
ಯಲಗಟ್ಟಾ ಗ್ರಾಮ ಸೆರಿದಂತೆ ಸುತ್ತಲಿನ 11 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಸುಮಾರು 21 ಎಕರೆ ಜಮೀನನ್ನು ಸರ್ಕಾರದ ಅಧಿನಕ್ಕೆ ಪಡೆಯಲು ಸೂಕ್ತವಾದ ಯಲಗಟ್ಟಾ ಶಿವಾರದ ಜಮೀನಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಲಿಂಗಸೂಗೂರು ತಹಶೀಲ್ದಾರ್ ಚಾಮರಾಜ ಪಾಟೀಲ್,ಗುರುಗುಂಟಾ ಹೋಬಳಿಯ ಕಂದಾಯ ನಿರೀಕ್ಷಕರಾದ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳಾದ ಮಹಿಬುಬ್ ನದಾಫ್,ಯಲಗಟ್ಟಾದ ಮಾಜಿ ಗ್ರಾ.ಪಂ. ಅಧ್ಯಕ್ಷರಾದ ದೇವಪ್ಪ
ರೈತರಾದ ಶಿವಪ್ಪ,ಬಸವರಾಜ,ಕೃಷ್ಣ ಸೇರಿದಂತೆ ಯೋಜನಾ ವ್ಯಾಪ್ತಿಗೆ ಒಳಪಡುವ ಜಮೀನಿನ ರೈತರು ಇದ್ದರು.
ವರದಿ-ವೀರೇಶ ಅಂಗಡಿ