ನನ್ನಪ್ಪ

ನನ್ನಪ್ಪ

ಮನೆಮಂದಿಯ ತುತ್ತಿನ ಚೀಲ
ತುಂಬ; ಬೆವರ ಹರಿಸಿ ಮುಖದಿ
ನಗುವ ಮೂಡಿಸಿದ ನನ್ನಪ್ಪ…

ನಮ್ಮನು ಹದ್ದುಬಸ್ತಿನಲ್ಲಿಡಲು
ಯಜಮಾನನ ಹಣೆಪಟ್ಟಿಕೊಂಡ;
ದರ್ಪದ ನಾಟಕವಾಡಿದ ನನ್ನಪ್ಪ…

ಒಡಲೊಡಲ ಕೊಚ್ಚಿಹೋಗುವ
ಮಹಾಪ್ರವಾಹವಿದ್ದರೂ ಗಂಗೆಯಂತೆ
ಶಾಂತನಾಗಿದ್ದ ನನ್ನಪ್ಪ….

ಅಜ್ಜ-ಅಜ್ಜಿ ತೀರಿದಾಗಲೂ ದುಃಖವ
ಅದುಮಿಟ್ಟುಕೊಂಡವ; ಮಗಳು ಮದುವೆಯಾಗಿ ಹೊರಟಾಗ ಬಿಕ್ಕಿಬಿಕ್ಕಿ ಕಣ್ಣೀರಿಟ್ಟವ ನನ್ನಪ್ಪ…

ಮನದಿ ಅವಿತಿಟ್ಟ ಅವ್ಯಕ್ತ ಪ್ರೀತಿಯ
ಮಾತಿನಲ್ಲಿ ಹೇಳದವ; ಯಾರಿಗೂ ಹೇಳದೆ
ಮೌನವಾಗಿಯೇ ನಮ್ಮನ್ನಗಲಿದ ನನ್ನಪ್ಪ…..

ದೇವರೇ… ನನಗೊಂದು ವರಕೊಡು,
ಮತ್ತೆ ಬದುಕಿಬರಲಿ; ಎಂದೆಂದಿಗೂ
ನನ್ನ ಮಗನ ರೂಪದಲಿಯಾದರೂ ನನ್ನಪ್ಪ……

ಸುರೇಶ್ ಮಲ್ಲಿಗೆ ಮನೆ…ಶಿವಮೊಗ್ಗ

Don`t copy text!