ಪುನೀತ್’ ನಮನ

ಪುನೀತ್’ ನಮನ

‘ದೊಡ್ಮನೆ ಹುಡ್ಗ’
ಥೇಟ್ ಅಪ್ಪನಂತೆ
‘ನಟಸಾರ್ವಭೌಮ’ ನಾಗಿ
ನಟಿಸಿದ ‘ರಾಜಕುಮಾರ್’
ನಮ್ಮ ‘ಅಪ್ಪು’
~
‘ಯಾರೇ ಕೂಗಾಡಲಿ’
‘ವೀರ ಕನ್ನಡಿಗ’ ನಾಗಿ
‘ನಮ್ಮ ಬಸವ’ ನಂತೆ
ಸದಾ ‘ಬಿಂದಾಸ್’ ದಿಂದ
‘ಅಭಿ’ನಯಿಸಿದ
ನಮ್ಮ ‘ಯುವರತ್ನ’
~
‘ಆಕಾಶ’ದ
‘ಚಲಿಸುವ ಮೋಡಗಳ’ಲ್ಲಿ
‘ಎರಡು ನಕ್ಷತ್ರಗಳ’ ಬೆಳಗಿನಲ್ಲಿ
‘ಬೆಟ್ಟದ ಹೂವಾಗಿ’
‘ಮಿಲನ-ಮೈತ್ರಿ’ದೊಂದಿಗೆ
‘ಹೊಸ ಬೆಳಕು’ ಮೂಡಿಸಿದ
‘ಅಂಜನಿಪುತ್ರ’
~
‘ಶಿವ ಮೆಚ್ಚಿದ ಕಣ್ಣಪ್ಪ’ನಿಗೆ
‘ಚಕ್ರವ್ಯೂಹ’ ದಿಂದ
‘ಪ್ರೇಮದ ಕಾಣಿಕೆ’ಯಾಗಿ
‘ಪೃಥ್ವಿ’ಯಿಂದ ‘ಭಾಗ್ಯವಂತ’ನಿಗೆ
ಕರೆಸಿಕೊಂಡನು ಪುನೀತನಿಗೆ
‘ಪರಮಾತ್ಮ’
~
‘ಯಾರಿವನು’ ಗೊತ್ತೇ?
ಕಾಣದಂತೆ ಮಾಯವಾದ
‘ತಾಯಿಗೆ ತಕ್ಕ ಮಗ’
‘ಅರಸು’ ವಂಶದ ‘ಮೌರ್ಯ’
‘ರಾಮ’ನ ‘ಭಕ್ತ ಪ್ರಹ್ಲಾದ್’
“ರಾಜರತ್ನ”

(ವಿನೀತ ಭಾವದ *ಪುನೀತ್* ರಾಜನಿಗೆ ಅಕ್ಷರ ನಮನ….!! )

ಬಾಲಾಜಿ ಕುಂಬಾರ,ಚಟ್ನಾಳ

Don`t copy text!