ಜಕಣಾಚಾರಿ ದಿನಾಚರಣೆ ಆಚರಣೆ

ಜಕಣಾಚಾರಿ ದಿನಾಚರಣೆ ಆಚರಣೆ

e- ಸುದ್ದಿ ಮಸ್ಕಿ

ತಹಸೀಲ್ದಾರ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ ಯನ್ನು ಆಚರಿಸಲಾಯಿತು.
ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಕವಿತಾ ಆರ್ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ವಿಶ್ವವಿಖ್ಯಾತ ಅಮರಶಿಲ್ಪಿ ಜಕಣಾಚಾರಿ ಅವರ ಭಾವ ಚಿತ್ರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಜಕಣಾಚಾರಿಯವರ ಶಿಲ್ಪಕಲೆ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧವಾಗಿವೆ. ಹಾಗೆ ಸರ್ವ ಶ್ರೇಷ್ಠವಾಗಿವೆ ಎಂದರು. ಮುಖಂಡರಾದ ಅಂದಾನಪ್ಪ ಗುಂಡಳ್ಳಿ ಹಾಗೂ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಡಾ॥ ಪಂಚಾಕ್ಷರಯ್ಯ ದೊಡ್ಡಪ್ಪ ಸಗರದ ಹಾಗೂ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ ,
ಮೌನೇಶ ನಾಯಕ ಭರತ್ ಶೇಟ್  ವಿಶ್ವ ಕರ್ಮ ಸಮಾಜದ ಅಧ್ಯಕ್ಷರಾದ ಉದಯ  ಕುಮಾರ್ ಪತ್ತಾರ’  ತಾಲ್ಲೂಕಾಧ್ಯಕ್ಷರಾದ ಕಾಳಪ್ಪ ಪತ್ತಾರ್ ಕಣ್ಣುರು  ಡಾಕ್ಟರ್ ಸಂತೋಷ್  ಜನಾರ್ದನ್ ಪತ್ತಾರ್ ದೇವರಾಜ್ ಕಂಬರ್ , ಗುರುನಾಥ ಪತ್ತಾರ ,ಅಮರೇಶ ಪತ್ತಾರ್  ಸುರೇಶ್ ಪತ್ತಾರ್ ರಾಮಣ್ಣ ಪತ್ತಾರ ಭೀಮಣ್ಣ ಬಳಗಾನೂರು ಹನುಮೇಶ್ ಪತ್ತರ್ ಹಸ್ಮಕಲ್  ಅಯ್ಯಪ್ಪ ಪತ್ತಾರ್  ಮತ್ತು   ಸಮಾಜದ ಯುವಕರು ಮತ್ತು ಬಿಜೆಪಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಂಗ್ರೇಸ್ ಕಚೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರು ಸಂಸ್ಮರಣಾ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿ
ಮಸ‌್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ. ಚಿಗರಿ‌ ಮಾತನಾಡಿ ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ತಮ್ಮದೇ ಆದ ಕೊಡುಗೆಯನ್ನು ಶಿಲ್ಪ ಕಲೆಗೆ ನೀಡಿದ್ದಾರೆ. ಇವರಲ್ಲಿ
ವಿಷ್ಣುವರ್ಧನ ಅರಸನ ಕಾಲದಲ್ಲಿ ಕಲೆಯು ಉತ್ತುಂಗ ಶಿಖರದಲ್ಲಿತ್ತು. ವಿಷ್ಣುವರ್ಧನನ ಹೆಂಡತಿ ಶಾಂತಲೆ ನಾಟ್ಯ ರಾಣಿ ಎಂದು ಪ್ರಸಿದ್ಧಿಯಾಗಿದ್ದಳು.
ಈ ಕಾಲದಲ್ಲಿದ್ದ ಅಮರಶಿಲ್ಪಿ ಜಕಣಾಚಾರಿ ಬೇಲೂರು ಹಳೆಬೀಡಿನ ಚನ್ನಕೇಶವ ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ ಎಂದು ವಿವರಿಸಿದರು.
ಪುರಸಭೆ ಸದಸ್ಯ ಮಲ್ಲಯ್ಯ ಚಿಗರಿ‌, ಕಾಂಗ್ರೆಸ್ ಮುಖಂಡರಾದ ಪಂಪನಗೌಡ ಗುಡದೂರು, ಚಾಂದ್ ಸ್ಮೇಡ್ಮಿ, ಮಲ್ಲಯ್ಯ ಮುರಾರಿ, ವೀರೇಶ ಆನೆಹೂಸರು, ಕಾಳಪ್ಪ ಪತ್ತಾರ, ಮೈಬು ಹಣೆಗಿ, ಬಸವರಾಜ ಬಡಿಗೇರ, ಶಿವುಪುತ್ರ ಹಾಗೂ ಇನ್ನಿತರ ಉಪಸ್ಥಿತಿ ಇದ್ದರು.

Don`t copy text!