ನನರಾಯ
ಏಳುತ ಏಳುತ
ಯಾರಾರನು ನೆನೆಯಲಿ
ಒಲವ ಧಾರೆಯನು ಹರಿಸಿ
ರಮಿಸುತ ಬರುವ
ನನ ರಾಯನ ನೆನೆದೆನ
ರಾತ್ರಿಯ ಸೊಬಗು
ಆನಂದಿಸಿ
ರವಿಯ ಹೊಂಗಿರಣದ
ಮಾಲೆಯನು ಮಾಡಿ
ಮುಡಿಗೆ ಮಲ್ಲಿಗೆ
ತರುವ
ನನ ರಾಯನ
ನೆನೆದೆನ
ಚಂದಿರನ ತಾರೆಗಳನು
ಕರೆದು
ಚಂದದಿಂದ
ಅಲಂಕರಿಸಿ
ಅಂದದಿ ಆನಂದ ವಾಗಿರು
ಎಂದು ಹೇಳಿದ
ನನ ರಾಯನ
ನೆನೆದೇನ
ಸಿಟ್ಟು ಸೆಡವು
ಹೊಟ್ಟೆಯಲಿ
ಬಚ್ಚಿಟ್ಟುಕೊಂಡು
ಮೌನದಿಂದಲೇ
ಮನವ ಗೆದ್ದು
ಮಲ್ಲಿಗೆ ಯ
ಪರಿಮಳ ಹಾಸಿರುವ
ನನ ರಾಯನ ನೆನೆದೆನ
ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ