Blog
ಮಹಾಮನೆಯ ಮಹಾಮಗಳು
ಮಹಾಮನೆಯ ಮಹಾಮಗಳು
ಮಹಾಮನೆಯ ಮಗಳು
ಉರಿಯು೦ಡ ಕರ್ಪುರ
ಕದಳಿಯ ಕತ್ತಲೆಯ
ಬೆಳಗುವ ಮಹಾಬೆಳಗು
ಅಕ್ಕರೆಯ ಅಕ್ಕ
ಮಹಾದೇವಿಯಕ್ಕ
ತೊರೆದು ಕೌಶಿಕನರಮನೆ
ಹೊರಟಳು ಕಲ್ಯಾಣಕೆ
ತುಂಡು ಕಂಬಳಿ ಹೊತ್ತು
ತವರು ಮೋಹವ ಬಿಟ್ಟು
ತರು ಗುಲ್ಮ ಲತೆ ಹೂವು
ಪಶು ಪಕ್ಷಿ ದುಂಬಿಯ ಸ್ನೇಹ ತೊಟ್ಟು
ಮಗಳೆ೦ದು ಕರೆದೊಯ್ದ
ಅನುಭವದ ಮಂಟಪಕೆ
ಅಣ್ಣ ಬಸವಣ್ಣ ಶರಣರ ದಂಡು
ಅಲ್ಲಮರ ಪ್ರಶ್ನೆಗೆ ಕೊಟ್ಟಳು ಉತ್ತರ ಅಪರೂಪದ ಅನುಭಾವ
ಚೆಲುವಿನ ಚಿತ್ಕಳೆ ಜ್ಞಾನದ ಜ್ಯೋತಿ
ಉಡತಡಿಯ ಉಡುಗೊರೆ
ಕಲ್ಯಾಣದ ಐಸಿರಿ
ಶ್ರೀಶೈಲಕೆ ನಡೆ ನಿಂತಳು
ಗುರು ಲಿಂಗವಿಡಿದು
ಚೆನ್ನಮಲ್ಲಿಕಾರ್ಜುನರ ನೆರಳು
ಮಹಾಮನೆಯ ಮಹಾಮಗಳು
–ಡಾ ಶಶಿಕಾಂತ ಪಟ್ಟಣ ರಾಮದುರ್ಗ