Blog

ವಿಜ್ಞಾನದಲ್ಲಿ ಧ್ಯಾನ, ಧ್ಯಾನದಿಂದಲೇ ಜ್ಞಾನ ಮತ್ತು ಆರೋಗ್ಯ

ವಿಜ್ಞಾನದಲ್ಲಿ ಧ್ಯಾನ, ಧ್ಯಾನದಿಂದಲೇ ಜ್ಞಾನ ಮತ್ತು ಆರೋಗ್ಯ

ಡಾ. ಹರಿಕೃಷ್ಣ ಸರ್ ಅವರ ಪ್ರಕಾರ
“ಒಬ್ಬರಿಗೆ ನೋವು ಕೊಡುವುದನ್ನು ಕಲಿಯಬೇಡಿ, ನೋವು ಮರೆಸುವುದನ್ನು ಕಲಿಯಿರಿ” ಎನ್ನುವ ದ್ಯೇಯದೊಂದಿಗೆ ಡಾ. ಹರಿಕೃಷ್ಣ ಸರ್ ವೃತ್ತಿಯಲ್ಲಿ ವೈದ್ಯರಾಗಿ ನಾರಾಯಣ ಹೃದಯಾಲಯದಲ್ಲಿ ಅನೆಸ್ತೇಶಿಯ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರವೃತ್ತಿಯಲ್ಲಿ ಜ್ಞಾನಿಗಳು, ಜ್ಞಾನ ಸಾಧಕರು ಹಾಗೂ ಪ್ರಚಾರಕರು

ಇವರು ಇದುವರೆಗೂ ೫೦೦೦ ಕ್ಕೂ ಹೆಚ್ಚು ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ ಅನೇಕ ಋಷಿಗಳನ್ನು , ಜ್ಞಾನ ಸಾಧಕರನ್ನು ಭೇಟಿ ಮಾಡಿ ಇಂದು ನಭೋಮಂಡಲದಲ್ಲಿ ಪ್ರಜ್ವಲವಾಗಿ ಹೊಳೆಯುತ್ತಿರುವ ದೃವ ನಕ್ಷತ್ರದಂತೆ ಪ್ರಜ್ವಲಿಸುತ್ತಾ ಇಂದು ಇವರು ಅನೇಕಲ್ ತಾಲ್ಲೂಕಿನಲ್ಲಿ ಹೊಳೆಯುತ್ತಿರುವ ಜ್ಞಾನ ನಕ್ಷತ್ರವಾಗಿ ಪ್ರತಿಯೊಬ್ಬರ ಬಾಳಿನಲ್ಲಿ ಸುಮಾರು ೬ ವರ್ಷಗಳಿಂದ ಧ್ಯಾನ ಎನ್ಹುವ ಬೀಜವನ್ನುವನ್ನು ಬಿತ್ತುತ್ತಿದ್ದಾರೆ. ಅದು ಇಂದು ಹೆಮ್ಮರವಾಗಿ ಎಷ್ಟೋ ಜನ ಬಾಳಿಗೆ ಬೆಳಕಾಗಿ, ಸಾವಿರಾರು ಮಂದಿ ತಮ್ಮ ಖಾಯಿಲೆಗಳಿಂದ ಮುಕ್ತರಾಗಿ ನೆಮ್ಮದಿ, ಸುಖ ಶಾಂತಿಯಿಂದ ಜೀವನ ಮಾಡುತ್ತಿದ್ದಾರೆ. ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರಿಗೆ ಅಲೊಪತಿ ಚಿಕಿತ್ಸೆ ಇಲ್ಲದೆ ಮಾರಕ ಖಾಯಿಲೆಗಳನ್ನು ಗುಣಮುಖರನ್ನಾಗಿ ಮಾಡಿದ ಹೆಮ್ಮೆ ಇವರಿಗೆ ಸಲ್ಲುತ್ತದೆ.

ನಮ್ಮ ಆರೋಗ್ಯದ ಕೀಲಿ ಕೈ ನಮ್ಮಲ್ಲಿಯೇ ಇದೆ” ಎನ್ನುವ ಮುಖ್ಯ ಧ್ಯೇಯದೊಂದಿಗೆ,
ಧ್ಯಾನದ ಮಹಿಮೆ , ಧ್ಯಾನ ಮಾಡುವ ವಿಧಾನದ ಬಗ್ಗೆ ಅನೇಕ ಶಾಲಾ- ಕಾಲೇಜುಗಳಲ್ಲಿ ಹಾಗೂ ಶಿಕ್ಷಕರಿಗಾಗಿ ಉಚಿತವಾಗಿ ಅನೇಕ ಕಾರ್ಯಗಾರಗಳನ್ನು ಮಾಡುತ್ತಿದ್ದಾರೆ ಹಾಗೂ ಪ್ರತಿದಿನ ರಾತ್ರಿ 8 ರಿಂದ 9:30 ರ ವರೆಗೆ ಉಚಿತ ತರಗತಿಗಳನ್ನು ನೀಡುತ್ತಿದ್ದಾರೆ.

ಡಾ. ಹರಿಕೃಷ್ಣರವರ ಪ್ರಕಾರ
ಧ್ಯಾನದ ಮಹತ್ವ
ಧ್ಯಾನವು ಆಂತರಿಕ ಶಾಂತಿ ಮತ್ತು ಆನಂದವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಇದು ಮನಸ್ಸಿನ ಶಾಂತಿಯನ್ನು ಹೆಚ್ಚಿಸಿ, ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ. ಧ್ಯಾನದ ಅಭ್ಯಾಸವು ಆಳವಾದ ವಿಶ್ರಾಂತಿಯನ್ನು ನೀಡುತ್ತದೆ, ಇದು ಒತ್ತಡವನ್ನು ಕಡಿಮೆಗೊಳಿಸಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯವಶ್ಯಕವಾಗಿದೆ. 

ಆರೋಗ್ಯದ ಮೇಲೆ ಧ್ಯಾನದ ಪರಿಣಾಮ:

ಧ್ಯಾನವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಚರ್ಮದ ಸಮಸ್ಯೆಗಳು, ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳು ಮುಂತಾದ ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಾಯಕವಾಗಿದೆ. 

ಸ್ವಾರ್ಥರಹಿತ ಸೇವಾ ಮನೋಭಾವ:
ಡಾ. ಹರೀಶ್ ಸರ್ ಅವರ ಸೇವೆಯು ಸ್ವಾರ್ಥರಹಿತವಾಗಿದೆ. ಅವರು ಯಾವುದೇ ವೈಯಕ್ತಿಕ ಲಾಭದ ಆಸೆಯಿಂದ ಅಲ್ಲದೆ, ಸಮುದಾಯದ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಧ್ಯಾನವನ್ನು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಸೇವಾ ಮನೋಭಾವವು ಸಮಾಜದಲ್ಲಿ ಆರೋಗ್ಯಕರ ಮತ್ತು ಸಂತುಷ್ಟ ಜೀವನವನ್ನು ಉತ್ತೇಜಿಸುತ್ತದೆ.

 

 

 

 

 

 

 

 

 

 

ಡಾ.ಮಮತ ✍🏻 ಕಾವ್ಯಬುದ್ಧ

Don`t copy text!