ಸನ್ಮಾನ್ಯ ಡಾ ಶಂಕರ ಬಿದರಿಯವರು
ಅಧ್ಯಕ್ಷರು ಅಖಿಲ ಭಾರತ ವೀರ ಶೈವ ಮಹಾಸಭೆ ಬೆಂಗಳೂರು
ವಿಷಯ – ಬಸವ ಜಯಂತಿಯ ಜೊತೆಗೆ ರೇಣುಕಾ ಜಯಂತಿಗೆ ಆಕ್ಷೇಪ
ಸನ್ಮಾನ್ಯರೇ
ಶರಣಾರ್ಥಿ
ಬಸವಣ್ಣನವರು ಈ ಜಗವು ಕಂಡ ಸರ್ವ ಶ್ರೇಷ್ಠ ದಾರ್ಶನಿಕ ಚಿಂತಕ ಸಮಾಜ ಸುಧಾರಕ. ಇಲ್ಲಿಯ ವರೆಗೆ ನಡೆದುಕೊಂಡು ಬಂದ ಬಸವ ಜಯಂತಿ ಅತ್ಯಂತ ಅರ್ಥಪೂರ್ಣ ಮತ್ತು ಸಾಂಸ್ಕೃತಿಕವಾಗಿ ಆಚರಿಸುತ್ತ ಬರುವಾಗ, ಈ ವರ್ಷದಿಂದ ತಾವು ಬಸವಣ್ಣನವರ ಜೊತೆಗೆ ರೇಣುಕಾರಾ ಜಯಂತಿಯನ್ನೂ ಆಚರಿಸಬೇಕೆಂದು ಸುತ್ತೋಲೆ ಹೊರಡಿಸಿದ್ದೀರಿ,ಇದು ಖಂಡನೀಯವಾದ ಬೆಳವಣಿಗೆ.
ರೇಣುಕರು 771 ದಾರ್ಶನಿಕ ಧಾರ್ಮ ಗುರು ಎಂದು ಏನೇನೋ ತಪ್ಪು ತಪ್ಪಾಗಿ ಹೇಳುತ್ತಿದ್ದೀರಿ. ಇದು ನಿಮ್ಮ ಅಧ್ಯಯನದ ಕೊರತೆಯನ್ನು ತೋರಿಸುತ್ತದೆ, ತಾವು ಹೇಳುವಾಗ ಎಲ್ಲಾ 770 ಅಮರ ಗಣಂಗಳ ಫೋಟೋ ಜೊತೆಗೆ ಬಸವಣ್ಣನವರ ಜಯಂತಿಯನ್ನು ಆಚರಿಸಬೇಕ್ಕೆನ್ನುವುದು ಅರ್ಥ ರಹಿತ ಮತ್ತು ಅವಾಸ್ತವಿಕವಾಗಿದೆ. ಈಗಾಗಲೇ ಹಲವಾರು ಸೈದ್ಧಾಂತಿಕ ಗೊಂದಲಗಳಿಂದ ಲಿಂಗಾಯತರು ಹೊರ ಬಾರದೆ ಲಿಂಗಾಯತ ಧರ್ಮ ಮಾನ್ಯತೆ ಸೇರಿ ಉಳಿದ ಎಲ್ಲಾ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ವೀರಶೈವರ ವಿರೋಧಿ ಅಲ್ಲ,. ವೀರಶೈವ ಲಿಂಗಾಯತ ಧರ್ಮದ ಒಂದು ಪಂಗಡವಾಗಿದೆ.
ತಾವು ಈಗ ಹೇಳಿಕೊಳ್ಳುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮರು ನಾಮಕರಣವೂ ತಪ್ಪು, ತಮ್ಮ ನಿಯಮಾವಳಿಯ ಪ್ರಕಾರ ವೀರಶೈವ ಮಹಾಸಭೆಯೂ ವೇದ ಆಗಮ ಶಾಸ್ತ್ರ ಪ್ರಣೀತ ಜನ್ಯವಾದ ಸಂಘಟನೆ ಎಂದು ನಮೂದಿಸಲಾಗಿದೆ, ಮೂವತ್ತು ವರುಷಗಳ ಹಿಂದೆ ನಾನು ವೀರಶೈವ ಮಹಾಸಭೆಯ ಸದಸ್ಯನಾಗಿ ಕೆಲಸ ಮಾಡಿದ್ದೇನೆ, ತಾತ್ವಿಕ ವ್ಯತ್ಯಾಸಗಳು ಗೊತ್ತಾದ ಮೇಲೆ ವೀರಶೈವ ಮಹಾಸಭೆ ಇಂದ ದೂರ ಕಾಪಾಡುಕೊಂಡಿದ್ದೇನೆ.
ಲಿಂಗಾಯತ ಧರ್ಮವು ಬಸವಣ್ಣವರು ಮತ್ತು ಎಲ್ಲಾ ಸಮುದಾಯದ ಶರಣರಿಂದ ಸ್ಥಾಪಿಸ ಪಟ್ಟಿದೆ. ಬಸವಣ್ಣನವರು ಇಂದು ಇಡೀ ಜಗತ್ತೇ ಒಪ್ಪಿಕೊಂಡ ಚಾರಿತ್ರಿಕ ಪುರುಷ, ನೀವು ಉಲ್ಲೇಖಿಸುವ ರೇಣುಕರು ಕಾಲ್ಪನಿಕ ಮತ್ತು ಪೌರಾಣಿಕ. ಹೀಗಾಗಿ ಬಸವ ಜಯಂತಿಯ ಜೊತೆಗೆ ರೇಣುಕಾರಾ ಜಯಂತಿಯ ತಮ್ಮ ಪ್ರಸ್ತಾಪ ಸರಿಯಲ್ಲ, ಈಗಾಗಲೇ ಕರ್ನಾಟಕ ಸರಕಾರವು ರೇಣುಕಾ (ರೇವಣ ಸಿದ್ಧ) ಜಯಂತಿಯನ್ನು ಮಾರ್ಚ ನಲ್ಲಿ ಅನುವು ಮಾಡಿಕೊಟ್ಟಿದ್ದಾರೆ.
ತಾವು ತಿಳಿದವರಾಗಿ ಇಂತಹ ಅನಗತ್ಯ ಗೊಂದಲ ಮೂಡಿಸುವ ಸುತ್ತೋಲೆಯನ್ನು ಈ ಕೂಡಲೇ ಹಿಂದೆ ಪಡೆದು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಹಕರಿಸಲು ಮನವಿ ಮಾಡುತ್ತೇನೆ.
–ಡಾ ಶಶಿಕಾಂತ ಪಟ್ಟಣ
ಅಧ್ಯಕ್ಷರು ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ಪುಣೆ
ತಮ್ಮ ಇಂಥ ಪ್ರತಿಭಟನೆಯ ಧ್ವನಿಗೆ ಬಸವಾ ಭಿಮಾನಿಗಳ ಧ್ವನಿಯನ್ನು ಸೇರಿಸಬೇಕಿದೆ. ಎಲ್ಲ ಬಸವ ಅಭಿಮಾನಿಗಳು ಇದನ್ನ ವಿರೋಧಿಸಿ ಪ್ರತಿಭಟನೆಯನ್ನು ಮಾಡಬೇಕಾದ ಅನಿವಾರ್ಯತೆ ಬಂದು ಒದಗಿದೆ. ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂಬುದೇ ನಮ್ಮ ಕಳಕಳಿ
ತಮ್ಮ ಇಂಥ ಪ್ರತಿಭಟನೆಯ ಧ್ವನಿಗೆ ಬಸವಾ ಭಿಮಾನಿಗಳ ಧ್ವನಿಯನ್ನು ಸೇರಿಸಬೇಕಿದೆ. ಎಲ್ಲ ಬಸವ ಅಭಿಮಾನಿಗಳು ಇದನ್ನ ವಿರೋಧಿಸಿ ಪ್ರತಿಭಟನೆಯನ್ನು ಮಾಡಬೇಕಾದ ಅನಿವಾರ್ಯತೆ ಬಂದು ಒದಗಿದೆ. ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂಬುದೇ ನಮ್ಮ ಕಳಕಳಿ