ಗುಡ್ ಪ್ರೈಡೆ
ಏಸು ಏಸೊಂದು ದಿನಗಳಾದವು ಕಣ್ಮರೆಯಾಗಿ
ಸಾವಿನಲ್ಲೂ ಶಾಂತಿ ಸಹನೆ ತೋರಿದ ದೊರೆಯಾಗಿ
ಇಂದಿಗೂ ಕಾಯುತ್ತಿರುವರು ನಿನ್ನ ಆಗಮನಕ್ಕಾಗಿ
ಇಂದೇ ಬಂದು ಬಿಡು ಈಸ್ಟರ್ ಹಬ್ಬದ ತೆರನಾಗಿ
ಸತ್ಯ ನುಡಿದು ಸರ್ವರಲ್ಲೂ ಸಮಾನತೆ ಕಂಡೆ
ಅಜ್ಞಾನ ಅಂಧಕಾರವ ಅಳಿದು ಸಂತಸಗೊಂಡೆ
ಕೊಟ್ಟಿಗೆಯಲ್ಲಿ ಹುಟ್ಟಿ ಎಲ್ಲರನ್ನೂ ಎತ್ತಿಕೊಂಡೆ
ಸತ್ಯವಂತರ ಬದುಕಿಗೆ ನೀನಾದೆ ಹೆಬ್ಬಂಡೆ
ದೇವದೂತನಿಂದ ಮೇರಿಯ ಗರ್ಭ ಸಂಜಾತ
ಜೋಸೆಫ್ ತಂದೆಯ ಪ್ರೀತಿಯ ಧರ್ಮ ಪ್ರಣೀತ
ಸ್ಮರಿಸುವರು ನಿನ್ನ ನಂಬಿದವರು ಅನವರತ
ಮತ್ತೆ ಕಾಲ ಕೆಟ್ಟಿದೆ ಹುಟ್ಟಿ ಬಾ ತಂದೆ ತ್ವರಿತ
ಕುರುಡರಾಗಿಹರು ಕಣ್ಣು ತೆರೆಸಲು ನೀ ಬರಬೇಕು
ದಾನ ಧರ್ಮ ಮಾಡದ ಕುಷ್ಠ ಕೈಗೆ ಶಕ್ತಿ ನೀಡಬೇಕು
ಹಣ ಆಯುಷ್ಯ ಶಾಶ್ವತವಲ್ಲವೆಂದು ಹೇಳಬೇಕು
ಪಾಪಾತ್ಮರ ಬದುಕಿಗೆ ದಾರಿ ದೀಪವಾಗಬೇಕು
ಸ್ವಾರ್ಥ ಪಟ್ಟಭಧ್ರರು ನಿನ್ನ ಶಿಲುಬೆಗೇರಿಸಿದರು
ಕರುಣೆಯಿಲ್ಲದೆ ದೇಹಕ್ಕೆ ಮೊಳೆ ಜಡಿದರು
ಗೊಲ್ಗೊಥಾದಲ್ಲಿ ರಕ್ತದಾ ಹೊಳೆ ಹರಿಸಿದರು
ಯಹೂದಿಗಳ ರಾಜನಿಗಾಗಿ ಕಂಬನಿ ಸುರಿಸಿದರು
ರಾಜನ ಕ್ರೌರ್ಯಕ್ಕೆ ಜನ ಮೂಕ ವಿಸ್ಮಿತರಾದರು
–ರವೀಂದ್ರ.ಆರ್.ಪಟ್ಟಣ
ಮುಳಗುಂದ — ರಾಮದುರ್ಗ
9481931842