“ಕಲಿಯುವ ಸಮಯದಲ್ಲಿ ಸಾಧ್ಯವಾದದ್ದು ಎಲ್ಲವನ್ನೂ ಕಲಿಯಬೇಕು”

ಸುವಿಚಾರ

“ಕಲಿಯುವ ಸಮಯದಲ್ಲಿ ಸಾಧ್ಯವಾದದ್ದು ಎಲ್ಲವನ್ನೂ ಕಲಿಯಬೇಕು”

ಕಲಿಯುವಿಕೆ ಜೀವನಕ್ಕೆ ನಿರಂತರ ಇಂತಹ ವಿದ್ಯೆ ಕಲಿಯಬಾರದು, ಇಂತಹದ್ದನ್ನು ಕಲಿಯಲೇ ಬೇಕು ಎಂಬ ನಿಯಮ ಇರುವುದಿಲ್ಲ. ಕಲಿಯುವುದು ಉನ್ನತಿಯ ಮೂಲ. ವಿದ್ಯೆ ಯಾವುದೇ ಇರಲಿ ನಿಷ್ಠೆಯಿಂದ ಕಲಿಯಬೇಕು. ಕಲಿಯಲು ವಯಸ್ಸಿನ ಮಿತಿ ಇಲ್ಲ. ಜೀವನ ದಿನ ನಿತ್ಯವೂ ಒಂದೊಂದು ಹೊಸ ಪಾಠ ಕಲಿಸುತ್ತಿರುತ್ತದೆ.

ಊಟ ಮಾಡುವಾಗ ಹೇಗೆ ಹೊಟ್ಟೆ ತುಂಬಾ ಉಣ್ಣಬೇಕೋ ಅದೇ ರೀತಿ. ಕಲಿಯುವಾಗ ಸಂಪೂರ್ಣವಾಗಿ ಕಲಿತು ಬಿಡಬೇಕು. ಜೀವನದ ಯಾವ ವಿದ್ಯೆ ಯಾವ ಸಮಯಕ್ಕೆ ಉಪಯೋಗಕ್ಕೆ ಬರುತ್ತದೆಯೋ, ಕಲಿತಿರುವ ವಿದ್ಯೆ ಸಂಪತ್ತು ಇದ್ದಂತೆ ಅವಶ್ಯಕತೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬಳಸಬಹುದು.

ಜೀವನದಲ್ಲಿ ವಿದ್ಯಾವಂತರಾಗುವುದು ಬಹು ಮುಖ್ಯ. ಅಕ್ಷರಸ್ಥರು ಬಹಳಷ್ಟು ಜನ ದೊರಕಬಹುದು ವಿದ್ಯಾವಂತರಾಗುವುದು ಬಹು ಮುಖ್ಯ

ಮಾಧುರಿ ಬೆಂಗಳೂರು

Don`t copy text!