ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ 

ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ
ಬೆಂಕಿಯ ಬೆಳಕಿನಂತೆ ನೀನಿಪ್ಪೆಯಯ್ಯಾ
ಇದು ಕಾರಣ
ನಿಮ್ಮ ಕಂಡೆ ಪರಮಜ್ಞಾನಿ, ಗುಹೇಶ್ವರ

                                                 -ಅಲ್ಲಮಪ್ರಭು

ಕಿಚ್ಚಿನ ಕೆಂಡದಂತೆ ಹೊರೆಯಲ್ಲಿಪ್ಪೆಯಯ್ಯಾ

ಪರಶಿವನು ಬೂದಿಮುಚ್ಚಿದ ಕೆಂಡದಂತೆ ನಮ್ಮ ದೇಹದ ಮರೆಯಲ್ಲಿಯೇ ಇದ್ದಾನೆ .
ನೋಡುವ ಜನರಿಗೆ ಶರಣ ಸಾಮಾನ್ಯ ವ್ಯಕ್ತಿ ಅಲ್ಲ ಅವನು ಒಬ್ಬ ಶಕ್ತಿ ಎನ್ನುವ ಅರಿವು ವಿನ ಕಣ್ಣು ತೆರೆದು ನೋಡಿದರೆ ಶರಣರಲ್ಲಿರುವ. ಮಹತಿಯು ಗೊತ್ತಾಗುತ್ತದೆ .
12ನೇ ಶತಮಾನದ ಬಸವಾದಿ ಪ್ರಮಥ ಶರಣ ಶರಣೆಯರ ತನುವಿನಲ್ಲಿರುವ ಪರಮಾತ್ಮನ ಶಕ್ತಿಯ ಅನೇಕ ಜೀವನದ ಘಟನೆಗಳನ್ನುಅವಲೋಕಿಸಿದಾಗ ನಿಜಕ್ಕೂ ಅಚ್ಚರಿ ಆಗುವುದು.
ಅವಾಗಿನ ಕಾಲದ ಶರಣ ಶರಣೆಯರು ದೇಹವು ಒಂದು ಬೂದಿ ಮುಚ್ಚಿದ ಕೆಂಡ ಆ ಕೆಂಡವನ್ನು ಮುಟ್ಟಿದಾಗ ನಮ್ಮ ಕೈಯನ್ನು ನಾವೇ ಸುಟ್ಟುಕೊಳ್ಳುವೆವು .ಎನ್ನುವ ಅರಿವು ನಮಗೆ ಆಗಬೇಕು
ಶರಣರು ಸಾಮಾನ್ಯ ವ್ಯಕ್ತಿಗಳಲ್ಲ .ಅವರಲ್ಲಿ ಒಂದು ಶಕ್ತಿ ಚೈತನ್ಯವಿದೆ .ಒಳಗೆ ಅಡಗಿ ಕುಳಿತಿರುವ ಅಗೋಚರವಾದ ಮಹಿಮೆ ಶರಣ ಶರಣೆಯರಲ್ಲಿ ಇದೆ ಎನ್ನುವ ಭಾವ ಈ ನುಡಿಯಲ್ಲಿ ಅರ್ಥೈಊಹಿಸಬಹುದು.

ಬೆಂಕಿಯ ಬೆಳಕಿನಂತೆ ನೀನಿಪ್ಪೆಯಯ್ಯಾ

ಇಲ್ಲಿ ಬೆಂಕಿಯ ಬೆಳಕು ಎಂದರೆ ಶರಣ ಪ್ರಖರವಾಗಿ ಹೊಳೆಯುವ ಅಖಂಡ ಜ್ಞಾನ ಜ್ಯೋತಿ ಯಾಗಿದ್ದಾನೆ ಹೇಗೆ ಪರಮಾತ್ಮ ನಮ್ಮೆಲ್ಲರನ್ನು ಬೆಳಗುವ ಕತ್ತಲೆಯಿಂದ ಬೆಳಕಿನ ಕಡೆಗೆ ಹೇಗೆ ಕರೆದುಕೊಂಡು ಹೋಗಿ ಜ್ಞಾನ ಜ್ಯೋತಿಯನ್ನು ಬೆಳಗಿಸುವನೋ ಹಾಗೆ ಶರಣರು ಕೂಡಾ ಅಜ್ಞಾನದಿಂದ ತುಂಬಿದ ಜಗದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುವರು. ನುಡಿದಂತೆ ನಡೆದು ತೋರಿಸಿ ಬದುಕಿಗೆ ಮಾರ್ಗಿಯಾಗಿರುವ ನಮ್ಮ ಶರಣರು ಶಿವಸ್ವರೂಪರು ಎನ್ನುವ ಭಾವ ಈ ಒಂದು ನುಡಿಯಲ್ಲಿ ತಿಳಿದುಕೊಳ್ಳಬಹುದು .

ನಿಮ್ಮ ಕಂಡೆ ಪರಮಜ್ಞಾನಿ, ಗುಹೇಶ್ವರ

ಮಾತು ಮನಸ್ಸು ಬುದ್ಧಿ ಗಳಿಗತೀತವಾಗಿಯೂ ಅವುಗಳನ್ನು ಬೆಳಗುವ ಅರಿವಿನ ಜ್ಯೋತಿ ಯಾಗಿರುವ ಪರಶಿವನನನ್ನು ಶರಣನಾದವನು ಮಾತ್ರ ಕಾಣುವುದರಿಂದ ಶರಣ ಪರಮಾತ್ಮ ನಾಗಿದ್ದಾನೆ ಎನ್ನುವ ಭಾವ .

ಸಾವಿತ್ರಿ ಕಮಲಾಪೂರ 
ಮೂಡಲಗಿ


Don`t copy text!