ವೈರಾಗ್ಯನಿಧಿ ಅಕ್ಕ ಮಹಾದೇವಿಯವರ ವಚನಗಳಲ್ಲಿ “ಮಾಯೆ”

ವೈರಾಗ್ಯನಿಧಿ ಅಕ್ಕ ಮಹಾದೇವಿಯವರ
ವಚನಗಳಲ್ಲಿ “ಮಾಯೆ”

ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ, ಆಕೆ ತಾಳ್ಮೆಯ ಪ್ರತಿರೂಪ. ಹಾಗೆಯೇ ಶಕ್ತಿಯ ಸಂಕೇತದ ಉಗ್ರರೂಪಕ್ಕೂ ಸಾಕ್ಷಿಯಾಗಿದ್ದಾಳೆ. ಕ್ಷಮಯಾ ಧರಿತ್ರಿಯಾದರೂ ಚಂಚಲತೆಯ ಸ್ವಭಾವವುಳ್ಳವಳೂ ಸಹ.

೧೨ ನೇ ಶತಮಾನದ ಸಮಾಜದಲ್ಲಿ ಬಸವಣ್ಣನವರಿಂದ ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಬೆಳಕಿಗೆ ತರುವಂಥಾ ಕೆಲಸ ಆಯಿತು. ಬಸವಣ್ಣನವರ ಈ ಕ್ರಾಂತಿಯಲ್ಲಿ ರ‍್ನಾಟಕವು ಅಭೂತಪರ‍್ವ ಅನುಪಮ ಮಹಿಳಾ ವಚನಕರ‍್ತಿಯರನ್ನು ಕಂಡಿತು. ಪುರುಷರಿಗೆ ಸರಿ ಸಮಾನರಾಗಿ ಸಾಮಜೋ-ಧರ‍್ಮಿಕ ಮತ್ತು ಸಾಹಿತ್ಯ ಕೇತ್ರಗಳಲ್ಲಿ ಪಾಲ್ಗೊಂಡರು. ಆಧ್ಯಾತ್ಮಿಕ ಅನುಭಾವದ ಅಭಿವ್ಯಕ್ತಿಯಲ್ಲಿ ಶರಣೆಯರು ಯಾರಿಗೂ ಕಡಿಮೆಯಿಲ್ಲದಂತೆ ಕೆಲಸ ಮಾಡಿದರು. ಮಹಿಳೆಯರಿಗೆ ಗೌರವ ಕೊಟ್ಟು ಅಷ್ಟೇ ಅಲ್ಲ ಅವರನ್ನು ವಚನಕರ‍್ತಿಯರನ್ನಾಗಿ ಪರಿಚಯಿಸಿದರು. ಮೋಳಿಗೆ ಮಹಾದೇವಿಯಕ್ಕ, ಸತ್ಯಕ್ಕ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ಆಮುಗೆ ರಾಯಮ್ಮ, ಧೂಪದ ಗೊಗ್ಗವ್ವೆ ಮುಂತಾದವರನ್ನು ಹೆಸರಿಸಬಹುದು. ಕೇವಲ ಎರಡು ದಶಕಗಳಲ್ಲಿ ನಾಡಿನ ತುಂಬ ಈ ವಚನಕರ‍್ತಿಯರು ಕಂಗೊಳಿಸಿದ್ದು ಆಶ್ರ‍್ಯ ಮತ್ತು ಅದ್ಭುತ.

ಅಕ್ಕ ಮಹಾದೇವಿಯವರ ಜೀವನ ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಚರಿತ್ರೆ. ಅವರ ಜೀವನವನ್ನು ಕುರಿತಂತೆ ಅನೇಕ ಕವಿಗಳು, ಶರಣರು ತಮ್ಮ ತಮ್ಮ ಗ್ರಂಥಗಳಲ್ಲಿ ನಿರೂಪಿಸಿದ್ದಾರೆ.

ಕ್ರ. ಸಂ. ಕಾಲಘಟ್ಟ
(ಕ್ರಿ. ಶ) ಗ್ರಂಥರ‍್ತೃ ಗ್ರಂಥದ ಹೆಸರು
೧ ೧೧೯೦ ಪಾಲ್ಕುರಿಕೆ ಸೋಮನಾಥ ಬಸವ ಪುರಾಣಮು
೨ ೧೧೯೫ ಹರಿಹರ ಬಸವರಾಜದೇವರ ರಗಳೆ
೩ ೧೪೨೦ ಶಿವಗಣ ಪ್ರಸಾದಿ ಮಹದೇವಯ್ಯ ಶೂನ್ಯ ಸಂಪಾದನೆ
೪ ೧೪೩೦ ಚಾಮರಸ ಪ್ರಭುಲಿಂಗಲೀಲೆ
೫ ೧೪೯೫ ಹಲಗೆ ರ‍್ಯ ಶೂನ್ಯ ಸಂಪಾದನೆ ಪರಿಷ್ಕರಣೆ
೬ ೧೫೧೦ ಗೂಳೂರು ಸಿದ್ಧವೀರಣ್ಣನೊಡೆಯರು ಪ್ರಭುದೇವರ ಶೂನ್ಯ ಸಂಪಾದನೆ
೭ ೧೫೬೦ ಚೆನ್ನಬಸವಾಂಕ ಮಹಾದೇವಿಯಕ್ಕನ ಪುರಾಣ
೮ ೧೬೦೦ ರಾಚಕವಿ ಮಹಾದೇವಿಯಕ್ಕನ ಸಾಂಗತ್ಯ
೯ ೧೬೫೦ ಸಿದ್ಧನಂಜೇಶ ಗುರುರಾಜ ಚಾರಿತ್ರ‍್ಯ
೧೦ ೧೬೭೨ ಶಾಂತಲಿಂಗ ದೇಶಿಕ ಭೈರವೇಶ್ವರ ಕಥಾಮಣಿ ಸೂತ್ರ ರತ್ನಾಕರ

ಅಕ್ಕ ಮಹಾದೇವಿಯವರು ಆಧ್ಯಾತ್ಮ ಲೋಕದ ಮೇರು ಶಿಖರ. ಬಾಲ್ಯದಿಂದಲೇ ಲೌಕಿಕದಿಂದ ಅಲೌಕಿಕದತ್ತ ಪಯಣವನ್ನು ಬೆಳೆಸಿದಂಥ ಅಕ್ಕ ಮಹಾದೇವಿಯವರು ಕೌಶಿಕ ರಾಜನ ಕಾಮ ಪ್ರಭಾವಳಿಯನ್ನು ಕಿತ್ತೊಗೆದು ಚೆನ್ನಮಲ್ಲಿಕರ‍್ಜುನನ್ನು ತನ್ನ ಗಂಡನೆಂದೇ ಭಾವಿಸಿ ತನ್ನನ್ನೇ ಆತನಿಗೆ ರ‍್ಪಿಸಿಕೊಂಡಂಥವರು. ಶೂನ್ಯ ಸಂಪಾದನೆಗಳು, ಬಸವ ಪುರಾಣಗಳು ಮತ್ತು ಅನೇಕ ಕಾವ್ಯ-ಕಥೆಗಳಲ್ಲಿ ಕೌಶಿಕನೊಂದಿಗೆ ವಿವಾಹ ಮತ್ತು ಅನುಭವ ಮಂಟಪದಲ್ಲಿ ನಡೆದ ಅಲ್ಲಮ ಪ್ರಭುಗಳ ಜೊತೆಗಿನ ಸಂವಾದಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡಿವೆ. ಅಕ್ಕ ಮಹಾದೇವಿಯ ಮದುವೆ ಅಗಿದೆಯೋ ಇಲ್ಲವೋ, ಅವಳು ದಿಗಂಬರೆಯಾಗಿ ಬದುಕು ನಡೆಸಿದ್ದು ಕ್ಷಣಿಕವೋ ಅಥವಾ ಬದುಕಿನುದ್ದಕ್ಕೂ ಹಾಗೆಯೇ ಇದ್ದಳೋ ಎನ್ನುವುದಕ್ಕಿಂತ ಅಕ್ಕನ ಮಹಾದೇವಿಯವರ ವಚನಗಳ ಮೂಲಕ ಅದರಲ್ಲಿರುವ ತತ್ವಾಣ್ವೇಷಣೆ ಮಾಡುವದರತ್ತ ನಮ್ಮ ಗಮನ ಸಾಗಬೇಕಾದ ಅನಿವರ‍್ಯತೆ ಇದೆ. ಅಕ್ಕ ಮಹಾದೇವಿಯವರ ಸಂರ‍್ಷಮಯ ಬದುಕಿನ ಹಾದಿಯಲ್ಲಿ ಅಂತರಂಗದ ತೊಳಲಾಟ ಮತ್ತು ಬಹಿರಂಗದ ಬದುಕಿನ ಧೃಢ ಸಂಕಲ್ಪ, ಮನೋಸ್ಥರ‍್ಯವನ್ನು ಅವರ ವಚನಗಳಲ್ಲಿ ಕಾಣಬಹುದು.

ತನ್ನ ಉಡುಗೆ ತೊಡಿಗೆಗಳನ್ನು ಕಳಚಿದ ಅಕ್ಕ ಮಹಾದೇವಿಯವರು ತನ್ನ ಕೂದಲಿನಿಂದ ಮೈ ಮರೆಮಾಚಿಕೊಂಡದ್ದನ್ನು ತಮ್ಮ ಒಂದು ವಚನದಲ್ಲಿ ಸರ‍್ಥಿಸಿಕೊಂಡಿದ್ದಾರೆ.

ಕೈ ಸಿರಿಯ ದಂಡವ | ಕೊಳಬಹುದಲ್ಲದೆ ||
ಮೈ ಸಿರಿಯ ದಂಡವ | ಕೊಳಲುಂಟೆ? ||
ಉಟ್ಟ ಉಡಿಗೆಯ | ಸೆಳೆದುಕೊಳಬಹುದಲ್ಲದೆ ||
ಮುಚ್ಚಿ ಮುಸುಕರ‍್ದ | ನರ‍್ವಾಣವ ಸೆಳೆದುಕೊಳಬಹುದೆ? || ಚೆನ್ನಮಲ್ಲಿಕರ‍್ಜುನದೇವರ | ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ||
ಉಡುಗೆ ತೊಡುಗೆಯ | ಹಂಗೇಕೋ ಮರುಳೆ ||
(ಸಮಗ್ರ ವಚನ ಸಂಪುಟ: ಒಂದು-೨೦೧೬ / ಪುಟ ಸಂಖ್ಯೆ-೮೦೪ / ವಚನ ಸಂಖ್ಯೆ-೧೭೯)

ಧನದಿಂದ ಆಸ್ತಿ ಅಂತಸ್ತು ಮತ್ತು ಭೋಗದ ವಸ್ತುಗಳನ್ನು ಕೊಳ್ಳಲು ಸಾಧ್ಯ. ಆರೋಗ್ಯ ಮತ್ತು ದೇಹದ ಸೌರ‍್ಯವನ್ನು ಕೊಳ್ಳಲು ಸಾಧ್ಯವಿಲ್ಲ. ತೊಟ್ಟಿರುವ ಉಡುಗೆ ತೊಡುಗೆ ಕಿತ್ತುಕೊಳ್ಳಬಹುದಲ್ಲದೆ ಮನದಲ್ಲಿ ಮೂಡಿದ ನರ‍್ವಾಣವೆಂಬ ಮುಸುಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅದ್ಭುತ ಕಲ್ಪನೆಯೆಂದರೆ, ಚೆನ್ನಮಲ್ಲಿಕರ‍್ಜುನನನ್ನು ಗಂಡ ಎಂದು ಒಪ್ಪಿಕೊಂಡು, ತನ್ನನ್ನು ಆತನಿಗೆ ಸರ‍್ಪಿಸಿಕೊಂಡು ಆತನನ್ನೆ ಸುತ್ತಿಕೊಂಡಾಗ ಯಾವ ಲಜ್ಜೆ ಎನ್ನುತ್ತಾ ಎಲ್ಲ ಉಡುಗೆಗಳನ್ನೂ ತ್ಯಜಿಸುವ ಮೂಲಕ ಆಧ್ಯಾತ್ಮಿಕ ಉಡುಗೆ ತೊಡಿಗೆಗಳನ್ನು ಸುತ್ತಿಕೊಳ್ಳುತ್ತಾಳೆ.

ಇನ್ನು ಬಸವಾದಿ ಶರಣ ಶರಣೆಯರು ಮಾಯೆಯೆನ್ನು ಮೆಟ್ಟಿ ನಿಂತು ಆಧ್ಯಾತ್ಮದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದಂಥವರು. ಈ ಮಾಯೆಯನ್ನು ಎಲ್ಲ ಶರಣರು ತಮ್ಮ ವಚನಗಳಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಸತ್ಯವನ್ನು ಕಿರಿದು ಮಾಡಿ ಲೌಕಿಕ ವಿಷಯ ಸುಖಗಳಿಗೆ ಮಾರು ಹೋಗಿ, ದಿಕ್ಕು ತಪ್ಪಿಸುವ ಯೋಚನೆಗಳೇ “ಮಾಯೆ” ಯೆನ್ನುವ ವ್ಯಾಖ್ಯಾವನ್ನು ನಮ್ಮ ಪುರಾತನರು ನೀಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಹೆಮ್ಮೆ ಪಡುವಂಥ ಅಧಿಕಾರ ಮತ್ತು ಸ್ಥಾನಮಾನ, ಕಣ್ಣು ಕೋರೈಸುವ ರೂಪ-ಲಾವಣ್ಯ, ದೇಹಬಲ, ಐಶ್ರ‍್ಯ-ಅಂತಸ್ತು ಹಾಗು ಮನಸ್ಸನ್ನು ನಿಯಂತ್ರಿಸಲಾಗದ ಮನೋವಾಂಛೆಗಳು ಮಾಯೆಯೆನ್ನುವದರ ಸೂಕ್ಷ್ಮಾತಿ ಸೂಕ್ಷ್ಮ ರೂಪ. ನಾನೇ ಶ್ರೇಷ್ಠ ಎನ್ನುವ ಭಾವ. ಅದಕ್ಕೆ ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ ಈ ಮಾಯೆಯ ಪ್ರಭಾವವನ್ನು ತಿಳಿಸಿದ್ದಾರೆ.

ತನ್ನ ತಾನರಿದೆನೆಂಬವನ | ಮುನ್ನ ನುಂಗಿತ್ತು ಮಾಯೆ ||
ನಿನ್ನೊಳಗೆ ಅರಿವು | ಭಿನ್ನವಾಗಿರುತ್ತಿರಲು ||
ಮುನ್ನವೇ ನೀನು | ದೂರಸ್ಥ ನೋಡಾ ||
ಭಿನ್ನವಿಲ್ಲದ ಅಜ್ಞಾನವ | ಭಿನ್ನವ ಮಾಡಬಲ್ಲಡೆ ||
ತನ್ನಲ್ಲಿ ಅರಿವು | ನಿಜವಪ್ಪುದು ಗುಹೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-೨೦೧೬ / ಪುಟ ಸಂಖ್ಯೆ-೧೬೫ / ವಚನ ಸಂಖ್ಯೆ-೩೪೯)

ತನ್ನನ್ನು ತಾನು ಅರಿಯದೆ ಜ್ಞಾನಿಯಾಗಿದ್ದೇನೆ ಎನ್ನುವದು ಮಾಯೆಯ ಮತ್ತು ಅಹಂಕಾರದ ಪರಮಾವಧಿ. ಅರಿವು ಇಲ್ಲದೆ ಮಾತನಾಡುವದರಿಂದ ಅರಿವನ್ನು ಪಡೆಯುವದರಿಂದ ದೂರ ಹೋಗುವಂತಾಗುತ್ತದೆ. ಇಂಥ ಮಾಯೆಯ ಮೋಹಕ್ಕೊಳಗಾಗದೆ ಅಂತರಂಗದ ಅರಿವನ್ನು ಮೂಡಿಸಿಕೊಳ್ಳುವ ಸಾಧನೆ ಆಗಬೇಕು. ನಮ್ಮ ಮನದೊಳಗಿನ ಮಾಯೆಯನ್ನು ನಿಯಂತ್ರಿಸಿಕೊಂಡು ಮನಃಶುದ್ಧವಾಗಿದ್ದಲ್ಲಿ ನಾವು ಕಾಣುವುದೆಲ್ಲೂ ಶುದ್ಧವೆನ್ನುವುದು ಈ ವಚನದ ಸದಾಶಯ.

ಹೆಣ್ಣು-ಮಣ್ಣು-ಹೊನ್ನು ಎನ್ನುವ ಮಾಯೆಗಳ ಪ್ರಸ್ತಾಪ ಅನೇಕ ವಚನಗಳಲ್ಲಿ ಕಾಣಬಹುದು. ಆದ್ದರಿಂದ ಬಸವಾದಿ ಶರಣರು ಈ ಮೂರೂ ಮಾಯೆಗಳಿಗೆ ಅಂಟಿದ ಕಳಂಕವನ್ನು ತೆಗೆದು ಹಾಕುವ ನಿಟ್ಟಿನಲ್ಲಿ ತಮ್ಮ ಅನುಭಾವವನ್ನು ಪ್ರಸ್ತುತ ಪಡಿಸಿದ್ದಾರೆ. ಮಾಯೆಯನ್ನು ಅಕ್ಕ ಮಹಾದೇವಿಯವರು ಒಂದು ವಚನದಲ್ಲಿ ನಿರೂಪಿಸಿದ್ದಾರೆ. ಈ ವಚನದ ವಿಶ್ಲೇಷಣೆ ಪ್ರಸ್ತುತ ಲೇಖನದ ಆಶಯ.

ಬಿಟ್ಟೆನೆಂದಡೆ | ಬಿಡದೀ ಮಾಯೆ ||
ಬಿಡದಿದ್ದಡೆ | ಬೆಂಬತ್ತಿತ್ತು ಮಾಯೆ ||
ಯೋಗಿಗೆ | ಯೋಗಿಣಿಯಾಗಿತ್ತು ಮಾಯೆ ||
ಸವಣಂಗೆ | ಸವಣಿಯಾಯಿತ್ತು ಮಾಯೆ ||
ಯತಿಗೆ | ಪರಾಕಿಯಾಯಿತ್ತು ಮಾಯೆ ||
ನಿನ್ನ ಮಾಯೆಗೆ | ನಾನಂಜುವಳಲ್ಲ ||
ಚೆನ್ನಮಲ್ಲಿಕರ‍್ಜುನದೇವಾ | ನಿಮ್ಮಾಣೆ ||
(ಸಮಗ್ರ ವಚನ ಸಂಪುಟ: ಒಂದು-೨೦೧೬ / ಪುಟ ಸಂಖ್ಯೆ-೮೧೬ / ವಚನ ಸಂಖ್ಯೆ-೨೯೯)

ಲೋಕದೊಳಗಿದ್ದು ಲೋಕಾತೀತಳಾದ ಅಕ್ಕ ಮಹಾದೇವಿಯವರು ಮಾಯೆಯನ್ನು ಸುಂದರವಾಗಿ ಚಿತ್ರೀಕರಿಸಿದ್ದಾರೆ ಈ ವಚನದಲ್ಲಿ. ಮಾಯೆಯ ಮೋಹಕದ ಸುಳಿಗಾಳಿ ಎಂಥವರನ್ನು ಮೋಹಕಗೊಳಿಸುತ್ತದೆ. ಅದಕ್ಕೆ ಅಕ್ಕ ಮಾಹಾದೇವಿಯವರು ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುತ್ತಾರೆ. ಒಂದಲ್ಲಾ ಒಂದು ಮಾಯೆಯ ಪಾಶಕ್ಕೆ ಸಿಲುಕಿರುವದನ್ನು ಕಾಣಬಹುದು. ಬಿಡದಿದ್ದರೆ ಬೆಂಬತ್ತಿತ್ತು ಎನ್ನುವಲ್ಲಿ ಮಾಯೆಯ ಅಪರಿಮಿತ ಆರ‍್ಷಣೆಯ ಅಗಾಧತೆಯನ್ನು ಹೇಳಿದ್ದಾರೆ. ಶೂರ-ವೀರರು, ಯೋಗಿ-ಯೋಗಿಣಿಯರು, ಯತಿಗಳನ್ನೂ ಸಹ ತನ್ನ ವಶಕ್ಕೆ ತೆಗೆದುಕೊಳ್ಳುವ ಶಕ್ತಿ ಈ ಮಾಯೆಗಿದೆ. ಅನೇಕರನ್ನು ಇಂಥ ಭವ-ಬಂಧನಕ್ಕೆ ಮತ್ತು ರ‍್ಮ ಬಂಧನಕ್ಕೆ ಒಳಗಾಗಿದ್ದನ್ನು ಅಕ್ಕ ಮಹಾದೇವಿಯವರು ಹೇಳಿದ್ದಾರೆ. ಆದರೆ ಇದೆಲ್ಲಕ್ಕೆ ಹೊರತಾಗಿ ಅಕ್ಕ ಮಹಾದೇವಿಯವರ ಧೃಢ ನಿಶ್ಚಯವನ್ನು ಈ ವಚನದಲ್ಲಿ ದಾಖಲಿಸಿದ್ದಾರೆ. ಯಾವ ರೀತಿಯಾಗಿ ಕಾಡಿಸಿದರೂ ಈ ಮಾಯೆಯೆಂಬ ಪಾಶಕ್ಕೆ ನಾನು ಸಿಲುಕುವುದಿಲ್ಲ ಮತ್ತು ಅದಕ್ಕೆ ನಾನು ಹೆದರುವುದಿಲ್ಲ ಎನ್ನುವುದನ್ನು ಚೆನ್ನಮಲ್ಲಿಕರ‍್ಜುನನ ಮೇಲೆ ಆಣೆ ಮಾಡಿ ಹೇಳುತ್ತಾರೆ ಮತ್ತು ಅದರಂತೆ ನಡೆಯುತ್ತ ಬದುಕನ್ನು ನಡೆಸುತ್ತಾರೆ ಅಕ್ಕ ಮಹಾದೇವಿಯವರು. ಇಂಥ ಗಟ್ಟಿತನ ಮತ್ತು ಧೃಢ ನಿಶ್ಚಯವನ್ನು ಅಕ್ಕ ಮಹಾದೇವಿಯವರ ಈ ವಚನದಲ್ಲಿ ನಾವು ಕಾಣುತ್ತೇವೆ.

ವಟವೃಕ್ಷದೊಳಡಗಿದ | ಸಮರಸಬೀಜ ಭಿನ್ನಭಾವಕ್ಕೆ ಬಪ್ಪುದೆ? ||
ಕಂಗಳ ನೋಟ ಕರುವಿಟ್ಟ | ಮನದ ಸೊಗಸು ||
ಅನಂಗನ ದಾಳಿಯ | ಗೆಲಿದವು ಕಾಣಾ ||
ಈ ಮರೀಚಿಕಾಜಲದೊಳಡಗಿದ | ಪ್ರಾಣಿ ವ್ಯಾಧನ ಬಲೆಗೆ ಸಿಲುಕುವುದೆ? ||
ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ | ಮರೆಯಾ ಮರುಳೆ ||
ಚೆನ್ನಮಲ್ಲಿಕರ‍್ಜುನನಲ್ಲದೆ ಪರಪುರುಷ | ನಮಗಾಗದ ಮೋರೆ ನೋಡಾ ||
(ಸಮಗ್ರ ವಚನ ಸಂಪುಟ: ಒಂದು-೨೦೧೬ / ಪುಟ ಸಂಖ್ಯೆ-೮೨೩ / ವಚನ ಸಂಖ್ಯೆ-೩೬೦)

ಕರುವಿನತ್ತ ದೃಷ್ಟಿ ಬೀರುವ ಅದಮ್ಯ ಚೇತನದ ಕರುಣಾಮಯ ನೋಟ, ಅನಂಗ ಅಂದರೆ ಮನ್ಮಥನ ಕಾಮದ ವಶೀಕರಣ ನೋಟ, ಮರೀಚಿಕೆಯ ಜಲದ ಮುಸುಕಿನ ಆರ‍್ಷಣೆಯ ನೋಟ ಎಲ್ಲ ಶಬ್ದಪುಂಜಗಳಲ್ಲಿಯೂ ಕಂಡುಬರುವ ಮಾಯೆಯ ಪರಿಭಾಷೆ ಅನನ್ಯ, ಅನುಪಮ ಮತ್ತು ಅದ್ಭುತ. ಅಂತರಂಗದಲ್ಲಡಗಿರುವ ಮಾಯೆಯೆನ್ನುವ ದಾವಾನಲವನ್ನೂ ಅಲುಗಾಡಿಸುವ ಮಾಯೆಯ ಈ ನೋಟಗಳನ್ನು ವಚನದಲ್ಲಿ ಅಳವಡಿಸಿ, ಸಾಕ್ಷೀಕರಿಸಿ, ಬಿಂಬಿಸಿರುವ ಸಮರಸ ಬೀಜಕ್ಕಿರುವ ಶರಣಸತಿ-ಲಿಂಗಪತಿ ಎನ್ನುವ ಅಭಿನ್ನ ಭಾವದ ಕಲ್ಪನೆ ಸೀಮೆಯನ್ನೂ ಮೀರಿದ ನಿಸ್ಸೀಮ ತತ್ವ. ಕೆಸರಲ್ಲಿದ್ದೂ ಕೆಸರು ಅಂಟಿಸಿಕೊಳ್ಳದಂತೆ ಮಾಯೆಯನ್ನು ಮೆಟ್ಟಿ ನಿಂತ ಅಕ್ಕ ಮಹಾದೇವಿಯವರ ಬದುಕು ಆರ‍್ಶಮಯ. ಮಾಯೆಯ ವಶಕ್ಕೆ ಸಿಲುಕಿದ್ದೇನೆ ಎಂದು ತಿಳಿಯುವ ನೀವುಗಳು ಮರುಳರು ಎನ್ನುವ ಸಂದೇಶ ಈ ವಚನದಲ್ಲಿ ವ್ಯಕ್ತಪಡಿಸಿದ್ದಾರೆ ಅಕ್ಕ ಮಹಾದೇವಿಯವರು. ಪರಪುರುಷನ ಮುಖವೂ ಸಹ ನೋಡುವುದು ಅಕ್ಕ ಮಹಾದೇವಿಯವರಿಗಾಗದು. ಅವರು ಏನಿದ್ದರೂ ಚೆನ್ನಮಲ್ಲಿಕರ‍್ಜುನನಿಗೆ ತನ್ನನ್ನು ತಾನು ಸಂಪರ‍್ಣವಾಗಿ ಸರ‍್ಪಿಕೊಂಡವರು. ಅಕ್ಕ ಮಹಾದೇವಿಯವರನ್ನು ಎಂಥ ಮಾಯೆಯೂ ಅಲುಗಾಡಿಸಲಾಗದು ಎನ್ನುವ ಕಾಠಿಣ್ಯತೆ ಈ ವಚನದಲ್ಲಿ ಮೂಡಿ ಬಂದಿದೆ.
ಇಂಥ ಮಾಯೆಗೆ ನಾನು ಒಳಗಾಗುವವಳಲ್ಲ ಎನ್ನುವದನ್ನು ಮತ್ತೊಂದು ವಚನದಲ್ಲಿ ಹೇಳಿದ್ದಾರೆ.

ಕಿಡಿ ಕಿಡಿ ಕೆದರಿದಡೆ | ಎನಗೆ ಹಸಿವು ತೃಷೆಯಡಗಿತ್ತೆಂಬೆನು ||
ಮುಗಿಲು ಹರಿದು ಬಿದ್ದಡೆ | ಎನಗೆ ಮಜ್ಜನಕ್ಕೆರೆದೆನೆಂಬೆನು ||
ಗಿರಿ ಮೇಲೆ ಬಿದ್ದಡೆ | ಎನಗೆ ಪುಷ್ಪವೆಂಬೆನು ||
ಚೆನ್ನಮಲ್ಲಿಕರ‍್ಜುನಯ್ಯಾ | ಶಿರ ಹರಿದು ಬಿದ್ದಡೆ ||
ಪ್ರಾಣ | ನಿರ‍್ಪಿತವೆಂಬೆನು ||
(ಸಮಗ್ರ ವಚನ ಸಂಪುಟ: ಒಂದು-೨೦೧೬ / ಪುಟ ಸಂಖ್ಯೆ-೮೦೩ / ವಚನ ಸಂಖ್ಯೆ-೧೬೭)

ಅಂತರಂಗ ಮತ್ತು ಬಹಿರಂಗದ ಹೋರಾಟದಲ್ಲಿ ಆಧ್ಯಾತ್ಮದ ಮೇರು ಶಿಖರವಾಗಿದ್ದರು ಅಕ್ಕ ಮಹಾದೇವಿಯವರು. ಅಕ್ಕ ಮಹಾದೇವಿಯವರು ಉಡುತಡಿಯಿಂದ ಕಲ್ಯಾಣದವೆರೆಗೆ ಸವೆಸಿದ ಹಾದಿಯಲ್ಲಿ ನಡೆದ ಘಟನೆಗಳನ್ನು ಸಮೀಕರಿಸಿದ ವಚನ ಎನ್ನಬಹುದು. ಬಹಿರಂಗದಲ್ಲಿ ಅಕ್ಕ ಮಹಾದೇವಿಯವರು ಅನುಭವಿಸಿದ ಕಷ್ಟಗಳನ್ನು ಸಾಮಾನ್ಯರಾದ ನಮಗೆ ಊಹಿಸಲೂ ಅಸಾಧ್ಯ. ಕಲ್ಲು ಹೊಡೆದವರನ್ನು, ಲೋಕದ ಸ್ತುತಿ ನಿಂದನೆಗಳನ್ನು, ಕಾಮುಕ ದೃಷ್ಟಿ ಬೀರಿದವರನ್ನು ಸಂತೈಸುತ್ತಾ ಅದರ ಕಾಠಿಣ್ಯತೆಯನ್ನು ಅನುಭವಿಸುತ್ತ ತನ್ನನ್ನು ತಾನೇ ಸಂತೈಸುಕೊಳ್ಳುತ್ತಾ ಕೋಪ-ತಾಪಗಳನ್ನು ಮೀರಿ ಬದುಕಿನ ಉತ್ತುಂಗಕ್ಕೇರಿದ ಅಕ್ಕ ಮಹಾದೇವಿಯವರ ಆಧ್ಯಾತ್ಮಿತ ಸಾಧನೆ ಉತ್ಕೃಷ್ಟ ಮತ್ತು ಅನುಪಮ.

ತನುವಿಂಗೆ ತನುವಾಗಿ | ಮನಕ್ಕೆ ಮನವಾಗಿ ||
ಜೀವಕ್ಕೆ ಜೀವವಾಗಿ | ಇದ್ದುದನಾರು ಬಲ್ಲರೋ? ||
ಅದು ದೂರವೆಂದು | ಸಮೀಪವೆಂದು ||
ಮಹಂತ ಗುಹೇಶ್ವರ [ನು] | ಒಳಗೆಂದು ಹೊರಗೆಂದು ಬರುಸೂರೆವೋದರು ||
(ಸಮಗ್ರ ವಚನ ಸಂಪುಟ: ಒಂದು-೨೦೧೬ / ಪುಟ ಸಂಖ್ಯೆ-೧೫೦ / ವಚನ ಸಂಖ್ಯೆ-೧೫೫)

ಅಲ್ಲಮ ಪ್ರಭುಗಳು ಈ ವಚನದಲ್ಲಿ ನಿರೂಪಿಸಿದ ಹಾಗೆ ತನುವಿನಲ್ಲಿದ್ದು ತನುವ ಗೆದ್ದಳು, ಮನದಲ್ಲಿದ್ದು ಮನವ ಗೆದ್ದಳು, ವಿಷಯಂಗಳಲ್ಲಿದ್ದು ವಿಷಯಗಳನ್ನು ಗೆದ್ದಳು. ಕದಳಿ ಎಂಬುದು ತನು, ಕದಳಿ ಎಂಬುದು ಮನ ಎನ್ನುವಂತೆ ಅಂತರಂಗ-ಬಹಿರಂಗದ ಮಾಯೆಯನ್ನು ಮೀರಿ ನಿಂತು, ಲೋಕದಲ್ಲಿದ್ದು ಲೋಕಾತೀತಳಾದಳು ಅಕ್ಕ ಮಹಾದೇವಿ. ಇಂಥ ಅದಮ್ಯ ಚೇತನ ಮಿಂಚಿ ಮರೆಯಾದರೂ ಅಕ್ಕ ಮಹಾದೇವಿ ನೀಡಿದ ಸಂದೇಶಗಳು ಎಂದೆಂದೂ ಅಳಿಯದ ಅನನ್ಯ ಮತ್ತು ಅನುಪಮ.

ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್‌ ಹತ್ತಿರ
ಕ್ಯಾತ್ಸಂದ್ರ, ತುಮಕೂರು – ೫೭೨ ೧೦೪
ಮೋಬೈಲ್‌ ನಂ : ೯೭೪೧೩ ೫೭೧೩೨ / ೯೭೪೧೮ ೮೯೬೮೪


Don`t copy text!