ಇಸ್ಪೀಟ್ ಆಡುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ
e-ಸುದ್ದಿ ಮುದಗಲ್
ಇಸ್ಪೀಟ್ ಆಡುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ
4 ಲಕ್ಷ 15, 770 ರೂ. ನಗದು ಹಣ ಹಾಗೂ ನಾಲ್ಕು ಕಾರು, ನಾಲ್ಕು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಲಿಂಗಸೂಗೂರು ತಾಲೂಕಿನ ಮುದಗಲ್ ವ್ಯಾಪ್ತಿಯ ಬ್ಯಾಲಿಹಾಳ ಹಳ್ಳದ ಪಕ್ಕದಲ್ಲಿ ನಾಲ್ಕು ಜನರ ತಂಡ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳಿಂದ ದಾಳಿಮಾಡಿದ್ದಾರೆ
ಬಸವರಾಜ ನಾಲತವಾಡ, ಶರಣಬಸವ, ಬಸರಾಜ ತೋಡಗೇರ, ದೇವಕುಮಾರ ಎಂಬ ಆರೋಪಿಗಳು ಪೊಲೀಸರು ವಶಕ್ಕೆ ಪಡೆದು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.