ಕರುಳ ಕುಡಿ

ಕರುಳ ಕುಡಿ

ಹುಟ್ಟುವ ಮೊದಲೇ ಹೋರಾಟ ಶುರು
ಜನನಿಯ ಗರ್ಭ ತುಂಬಿದೆ ಅಣು
ಮೊದಲ ವಾರದಿಂದ ಕೊನೆ ಕ್ಷಣದಲ್ಲಿ ಮಗು
ನಿರಂತರ ಹೋರಾಟ ನಡೆಸಿ ಬೆಳೆದು ನಿಂತಿದೆ

ತಾಯಿಯ ಜೊತೆಗೆ ಅನುಪಮ ಅನುಬಂಧ
ಹೊಸ ತಿರುವು ದಿನ ನಿತ್ಯ ಹೊಸ ಹೊಸ ಅಂದ
ಅಣುವಾಗಿ ಮೂಡಿ ಮಗುವಾದ ರೋಚಕ ಬಂಧ
ಬೆಸೆದಿದೆ ಕರುಳ ಬಳ್ಳಿ ಎರೆಡು ಜೀವಿಗಳ ಸಂಬಂಧ

ಹೊರ ಬರಲು ಜಗ ನೋಡಲು ತುಂಬಾ ಆತುರ
ತಾಯಿಗೆ ಮಗುವ ನೋಡುವ ಪ್ರತಿಕ್ಷಣ ಕಾತುರ
ಜೀವ ತುಂಬುವ ಸೃಷ್ಟಿಯ ಸೊಬಗು ನಿರಂತರ
ಜೀವ ತುಂಬುವ ಜೀವ ಒತ್ತೆ ಇಡುವ ದೃಶ್ಯ ಭಯಂಕರ

ಅಗೋಚರ ನೋಡದೆ ಇರುವ ಪವಿತ್ರ ಆತ್ಮದ ಬಂಧ
ಕಣ್ಣರಿಯದ ಕರುಳ ಬಳ್ಳಿಯ ಬಣ್ಣದ ಹೊಸ ಬಂಧ
ಹೊಸದಾಗಿ ಬಿಗಿಯಾಗಿ ಮೂಡಿದ ಹೊಸ ಬಂಧ
ಸುಂದರ ಅದ್ಭುತವಾದ ನವ ಚೈತನ್ಯದ ಅನುಬಂಧ

ಕವಿತಾ ಮಳಗಿ

Don`t copy text!