ಇಳೆಯ ಉಳಿಸಿ

 

ಇಳೆಯ ಉಳಿಸಿ


ಪೃಥ್ವಿ ಎಂಬ ಅಧ್ಬುತ ತಾಣ
ಸೃಷ್ಟಿಯ ಅನಾವರಣ
ಜೀವ ಸಂಕುಲಕ್ಕೆ
ನಿಸರ್ಗ ನೀಡಿದ ದಾನ
ಸಹಜ ಮಳೆ ಬಿಸಿಲು
ಗಾಳಿ ಬೆಳಕು ನೀಡುತ
ಶುದ್ದ ಪರಿಸರ
ಜೀವಿಗಳಿಗೆ ಅಮೃತ ಪಾನ
ಬುದ್ದಿ ಜೀವಿ ಮಾನವ
ಬೆಳೆದ ಅಹಂಕಾರದಿ
ಮರೆತ ಜೀವನೀಡಿದವಳ
ಬಗೆದು ತೆಗೆದ ಒಡಲನು
ಬಿಚ್ಚಿ ಎಸೆದ ಹಸಿರು ಸೆರಗನು
ಮಾಡಿ ಬಿಟ್ಟ ಕಸದ ತೊಟ್ಟಿ
ಭೂತಾಯಿಯ ಒಡಲನು
ನರಳುತಿಹಳು ತಾಯಿ
ಕಾರ್ಬನ್ ಹೆಜ್ಜೆಗಳ ಅಡಿಯಲಿ
ಒಜೋನ ಪದರಿನ ಆತಂಕದಲಿ
ಬತ್ತಲೆಯಾಗುವ ಭಯದಲಿ
ಎಚ್ಚೆತ್ತು ಕೊಳ್ಳ ಬೇಕಿದೆ
ಅಭಿವೃದ್ದಿಯ ಮುಖವಾಡದಡಿಯ
ದುರಾಶೆಗಳ ಗುರುತಿಸ ಬೇಕಿದೆ
ತಡೆಯ ಬೇಕಿದೆ ಶೀಘ್ರವೇ
ಸೀರೆ ಎಳೆಯುತ್ತಿರುವ
ದುಶ್ಯಾಸನರ ಪೀಳಿಗೆಯ
ರಕ್ಷಿಸ ಬೇಕಿದೆ ತಾಯಿಯ
ಜೀವ ನೀಡಿದ ಇಳೆಯ
ಎಳಿ ಎಚ್ಚೆತ್ತು ಕೊಳ್ಳಿ
ಸಮಯ ಮೀರುವ ಮುನ್ನ


ಪ್ರೊ ರಾಜನಂದಾ ಘಾರ್ಗಿ

Don`t copy text!