ವ್ಯಾಮೋಹ

ಕವಿತೆ

ವ್ಯಾಮೋಹ

ಅಂದು ಸಮೃದ್ಧವಾಗಿತ್ತು
ಹೊತ್ತು, ಹೊತ್ತಿಗೂ ಮಳೆ,ಬೆಳೆ,
ವಿಶಾಲವಾದ ಕಾಡು, ಬಯಲು
ವಸುಂಧರೆಯ ನಗೆ…

ಧರೆಯೆ ಬಿರಿಯುವಷ್ಟು ಜನ
ಭೂತಾಯಿಗೆ ಹೆಚ್ಚಿದ ಭಾರ
ಕಡಿದರು ಎಲ್ಲಾ ಕಾನನ,
ಬೋಳಾಯಿತು ಬೆಟ್ಟ ಗುಡ್ಡ

ಚುಚ್ಚಿದರು ಅವನಿಜೆಯ
ಹರಿಸಿದರು ರಕ್ತದೋಕುಳಿಯ
ಕೆಟ್ಟ ಮಾನವನ ದುರಾಸೆಗೆ
ಎಲ್ಲವೂ ಸರ್ವನಾಶ…

ಎಚ್ಚೆತ್ತುಕೋ ಮನುಜ
ಉಳಿಯಲಿ ಮುಂದಿನ
ಭವಿಷ್ಯದ ತಲೆಮಾರು
ಕೊನೆಯಾಗಲಿ ನಿನ್ನ
ವ್ಯಾಮೋಹದ ಕಾರುಬಾರು…

-ಗೀತಾ.ಜಿ.ಎಸ್.
ಹರಮಘಟ್ಟ.ಶಿವಮೊಗ್ಗ


ಪ್ರೀಯ ಓದುಗರೇ,
e-ಸುದ್ದಿ ಅಂತರಜಾಲ ಪತ್ರಿಕೆಗೆ ಸುದ್ದಿ, ಲೇಖನ, ಜಾಹಿರಾತು ಕಳಿಸುವವರು ಸಂಪಾದಕರಾದ ವೀರೇಶ ಸೌದ್ರಿ ಅವರ ದೂರವಾಣಿ  ಸಂಖ್ಯೆಗೆ ಸಂಪರ್ಕಿಸಿ.
ದೂರವಾಣಿ ಸಂಖ್ಯೆ-9448805067

e-ಸುದ್ದಿ ಗೆ ಉಚಿತ ಚಂದಾದಾರರಾಗಲು ಸುದ್ದಿಯ ಕೆಳಗಡೆ ಬಲಬಾಗಲ್ಲಿ ಕಾಣಿಸುವ ಕೆಂಪು ಬೆಲ್ ಬಟನ್ ಒತ್ತಿ. ನಮ್ಮ ಎಲ್ಲಾ ಪ್ರಕಟಣೆಗಳನ್ನು ಓದಬಹುದು.

Don`t copy text!