ಕೈ ಹಿಡಿದು ನಡೆಸೆನ್ನನು
ಗಂಡ ಹೆಂಡತಿ ಬಂಧನ
ಬಾಳ ಬಂಡಿಗೆ ಹಿರಿಯರು
ಜೋಡಿಸಿದ ರಥದ
ಎರಡು ಚಕ್ರಗಳು…
ಒಲವಿನ ಎತ್ತುಗಳಿಗೆ
ಹೂಡೋಣ ನೊಗವ
ಕೂರುವೆ ಗಾಡಿಯ ಮೇಲೆ
ಸಾಗೋಣ ಹೊಲದ ಕಡೆಗೆ…
ಮುಂಗಾರು ಬಂದಿಹುದು
ಮಲಗದಿರು ನನ್ನೊಡೆಯ
ಹೊಲ ಹದವಾಗಿಹುದು
ಕಟ್ಟು ಬಾ ಕೂರಿಗೆಯ…
ಬಿತ್ತೋಣ ಪ್ರೀತಿಯ
ಬೀಜಗಳ ಜೊತೆ ಜೊತೆಗೆ
ಸಸಿಯಾಗಿ ಟಿಸಿಲೊಡೆದು
ಬೆಳೆಯಲಿ ಹೊನ್ನ ತೆನೆಯು..
ಸಿರಿ ಇಲ್ಲದಿದ್ದರೇನು
ಗುಣವಂತ ನನ್ನವನು
ಸದಾ ಕೈಹಿಡಿದು ನಡೆಸುವನು ಎಂದೆಂದಿಗೂ..
–ಗೀತಾ ಜಿ.ಎಸ್
ಹರಮಘಟ್ಟಶಿವಮೊಗ್ಗ