ತಿಳಿನೀರ ಕದಡಿ

ತಿಳಿನೀರ ಕದಡಿ
ಅಡಿಯಲ್ಲಿ ಉರಿಹಚ್ಚಿ
ಕೊಳಕು ತೊರಿಸಿ ಸಾಧಿಸುವೇನು
ಕದಡಿದ ನೀರು ಕುಡಿಯಲು ಬಪ್ಪುವುದೇ
ತಿಳಿನೀರಲ್ಲಿ ಹುಡುಕು
ಅಡಿಯಲ್ಲಿರುವ ಕಸವನ್ನು
ಕುಡಿಯಲು ಬಿಡು ಶಾಂತಿಯ ನೀರನು
ಜಾತಿಯ ಕಿಚ್ಚು ಹಚ್ಚಿ
ಮಕ್ಕಳಿಗೆ ಕಲಿಸುವಿರಿ ಸಹಬಾಳ್ವೆಯನು
ಕದಡಿದ ನೀರು ಕುಡಿಸಿ
ಯಾವ ರೋಗ ಮಾಡುವಿರಿ
ಮುಂದಿನ ಪೀಳಿಗೆಯನ್ನು
ಹರಿಯುವ ನೀರಲ್ಲಿ
ಕಸಕಡ್ಡಿ ಸಹಜ
ಎಲ್ಲವೂ ಅಡಿಯಲ್ಲಿ ಇರಲಿ
ತಿಳಿಯಾಗಿ ಮುಂದೆ ಸಾಗಲಿ ಬಿಡಿ
ಬದಕಲು ಬಿಡಿ ನಮ್ಮ ಮಕ್ಕಳನು ಮೊಮ್ಮಕ್ಕಳನುು

ಗಿರಿಜಾ s.y

Don`t copy text!