ಬಳಗಾನೂರು ಪ್ರೀಮಿಯರ್ ಲೀಗ್-೩ ಕ್ರೀಕೆಟ್ ಪಂದ್ಯಾವಳಿಗೆ ಶಾಸಕ ಬಸನಗೌಡ ತುರ್ವಿಹಾಳ ಚಾಲನೆ

ಬಳಗಾನೂರು ಪ್ರೀಮಿಯರ್ ಲೀಗ್-೩ ಕ್ರೀಕೆಟ್ ಪಂದ್ಯಾವಳಿಗೆ ಶಾಸಕ ಬಸನಗೌಡ ತುರ್ವಿಹಾಳ ಚಾಲನೆ

e-ಸುದ್ದಿ ಮಸ್ಕಿ

ಮೇ ೧೬ ರಂದು ನಡೆಯುವ ಮಾರುತೇಶ್ವರ ಜಾತ್ರೆ ನಿಮಿತ್ಯ ಹಮ್ಮಿಕೊಂಡಿದ್ದ ಪ್ರೀಮಿಯರ್ ಲೀಗ್ ಕ್ರೀಕೆಟ್ ಕ್ರೀಡಾಕೂಟಕ್ಕೆ ಮಂಗಳವಾರ ತಾಲೂಕಿನ ಬಳಗಾನೂರು ಪಟ್ಟಣದಲ್ಲಿ ಕ್ರೀಕೆಟ್ ಆಡುವದರ ಮೂಲಕ ಶಾಸಕ ಬಸನಗೌಡ ತುರ್ವಿಹಾಳ ಚಾಲನೇ ನೀಡಿದರು.
ನಂತರ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಆಟದ ನಿಯಮಗಳನ್ನು ಪಾಲಿಸುವದರ ಜತೆಗೆ ಕ್ರೀಡೆಯಲ್ಲಿ ಅಭಿಮಾನದಿಂದ ಭಾಗವಹಿಸುವುದು ಮುಖ್ಯವಾಗಿರುತ್ತದೆ ಎಂದರು.
ಕ್ರೀಕೆಟ್ ಆಟ ಜಗತ್ತಿನಲ್ಲಿ ಪ್ರಸಿದ್ಧವಾಗಿದ್ದು ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣಗಳಲ್ಲಿ ಯುವಕರು ಕ್ರೀಕೆಟ್ ಆಡುತ್ತಿದ್ದಾರೆ. ಕ್ರೀಕೆಟ್ ಇತ್ತೀಚಿನದಾಗಿದ್ದು ಭಾರತದಲ್ಲಿ ದೇಶಿ ಆಟಗಳಾದ ಕಬ್ಬಡ್ಡಿ, ಖೋ ಖೋ, ಕುಸ್ತಿ, ಮುಂತಾದ ದೇಶಿ ಆಟಗಳು ಕಣ್ಮರೆಯಾಗುತ್ತಿವೆ. ನಶಸಿ ಹೋಗುತ್ತಿರುವ ಆಟಗಳನ್ನು ಮತ್ತೆ ಆಡುವ ಮೂಲಕ ಮುಂದಿನ ಪಿಳಿಗೆಗೆ ಪರಿಚಯಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು.
ಈ ಹಿಂದೆ ಹಳ್ಳಿಗಾಡಿನಲ್ಲಿ ರೈತರು ಮತ್ತು ರೈತ ಮಹಿಳೆಯರು ಫಸಲು ತೆಗೆದುಕೊಂಡ ನಂತರ ಬೇಸಿಗೆಯಲ್ಲಿ ದೇಶಿ ಆಟಗಳಲ್ಲಿ ತೊಡಗುತ್ತಿದ್ದರು. ದೇಶಿ ಆಟದಲ್ಲಿ ದೈಹಿಕ ಸಾಮರ್ಥ್ಯ, ಬುದ್ದಿವಂತೆಕೆ ಮೈಳಯಿಸಿರುತ್ತವೆ ಎಂದರು.
ಗ್ರಾಮದ ಮುಖಂಡರಾದ ವೀರಭದ್ರಗೌಡ, ತಾ.ಪಂ. ಮಾಜಿ ಸದಸ್ಯ ಬಸನಗೌಡ, ಸಂಜಯಕುಮಾರ ಜೈನ್ ಹಾಗೂ ಇತರರು ಇದ್ದರು.

Don`t copy text!