ಗೂಡು

ಗೂಡು

ಮನಸ್ಸಿನ ಮರೆಯಲೊಂದು
ಗೂಡು,
ಅದರೊಳಗೊಂದು
ಬಣ್ಣದ ತೇರು,
ತೂರಿ ಬರುತ್ತಿರುವ
ಕಾರ್ಮೋಡ,
ಕಾಯುತ್ತಿರುವ ಕನಸು,
ಎಲ್ಲಾ ಅದರ ಸವಾರರೇ,
ಮಾತಿಲ್ಲದ ಬದುಕು
ಎಷ್ಟೋ ಕನಸುಗಳ
ಹೊತ್ತ
ಪ್ರೀತಿ ಬದುಕಿಲ್ಲದೆ
ಸಾಗುತ್ತಿರುವುದು ಅದರಷ್ಟಕ್ಕೆ, ಯಾವುದೋ
ಒಂದು ಮರೆಯಲ್ಲಿ, ನಿಲ್ಲಲಾರದೆ ನಿಂತ
ಕನಸೊಂದು,
ಬದುಕುಕಾಡಿ ಮರೆಯಾದಾಗ,
ಮರೆತು ಹೋದ ಕನಸೆ,
ನೀ ರಸ ಬದುಕು
ಹಾಳು ಕವನ ಹೆಕ್ಕಿ ತೆಗೆದ ಕನಸ್ಸಿನ
ಭಾವಕ್ಕೊಂದು ಮಂಥನ,

ರೇಖಾ ವಡಕಣ್ಣವರ
ಲಕ್ಷ್ಮೇಶ್ವರ

Don`t copy text!