10 ಕೀ.ಮೀ ಪಾದಯಾತ್ರೆ ಮಾಡಿದ ಕೆಆರ್‍ಎಸ್ ಪದಾಧಿಕಾರಿಗಳು ಸರ್ಕಾರಿ ಭೂಮಿಯನ್ನು ರೈತರಿಗೆ ಕೊಡಿ -ಡಿ.ಎಚ್.ಪೂಜಾರ್

e-ಸುದ್ದಿ, ಮಸ್ಕಿ
ಬಡವರು ಸಾಗುವಳಿ ಮಾಡುತ್ತಿರುವ ಗೋಮಾಳವನ್ನು ರೈತರಿಗೆ ಕೊಡಬೇಕು. ಸರ್ಕಾರದ ಭೂಮಿಯಲ್ಲಿ ದನ ಕುರಿಗಳನ್ನು ಮೇಯಿಸಲು ಅವಕಾಶ ಕೊಡಬೇಕು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರ ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಸೀಲ್ ಕಚೇರಿ ಮುಂದೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೆಆರ್‍ಎಸ್ ಸಂಘಟನೆಯ ಸದಸ್ಯರು ಮಸ್ಕಿ ತಾಲೂಕಿನ ಹೂವಿನಬಾವಿ ಗ್ರಾಮದಿಂದ ಮಸ್ಕಿ ವರೆಗೆ 10 ಕೀ.ಮೀ ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಿದರು.

ತಾಲೂಕಿನ ಹೂವಿಭಾವಿ ಸ.ನಂ 32 ರಲ್ಲಿ 605 ಸರ್ಕಾರಿ ಭೂಮಿ ಇದ್ದು, ಈ ಗ್ರಾಮದ ಬಡ ಕುಟುಂಬಗಳು ಅನೇಕ ವರ್ಷಗಳಿಂದ 200 ಎಕರೆ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಗಳು ತೊಂದರೆ ಕೊಡುತ್ತಿರುದನ್ನು ನಿಲ್ಲಿಸಬೇಕು. ಮಸ್ಕಿ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ನೀರಾವರಿ ಸೌಲಭ್ಯ ಒದಗಿಸಬೆಕು. ಸೂರ್ಯಕಾಂತಿ, ತೊಗರಿ ಬೆಳೆಗಳನ್ನು ಬೆಳೆದು ಹಾಣಿಯಾದ ರೈತರಿಗೆ ಎಕರೆಗೆ 30 ಸಾವಿರ ರೂಪಾಯಿ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಕೆಆರ್‍ಎಸ್‍ನ ಜಿಲ್ಲಾ ಅಧ್ಯಕ್ಷ ಅಶೋಕ ನಿಲೋಗಲ್, ಜಿಲ್ಲಾ ಕಾರ್ಯದರ್ಶಿ ಪರುಶುರಾಮ, ಟಿಯುಸಿಐ ರಾಜ್ಯ ಮುಖಂಡ ಚಿನ್ನಪ್ಪ ಕೊಟ್ರೇಶಿ, ಮಸ್ಕಿ ತಾಲೂಕು ಕೆಆರ್‍ಎಸ್ ಅಧ್ಯಕ್ಷ ಸಂತೋಷ ಹಿರೇದಿನ್ನಿ, ತಾಲೂಕು ಕಾರ್ಯದರ್ಶಿ ಮಾರುತಿ ಜಿನ್ನಾಪುರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

Don`t copy text!