e-ಸುದ್ದಿ, ಮಸ್ಕಿ
ಸ್ಥಳೀಯ ಪುರಸಭೆಗೆ ಅಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಬಸನಗೌಡ ಪಾಟಿಲ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕವಿತಾ ಅಮರೇಶ ಮಾಟೂರು ಅವರನ್ನು ಸೋಮವಾರ ಮುಸ್ಲಿಂ ಸಮುದಾಯದ ಮುಖಂಡರು ಸನ್ಮಾನಿಸದರು.
ಮುಸ್ಲಿಂ ಸಮಾಜದ ಮುಖಂಡ ಹಾಗೂ ಪತ್ರಕರ್ತರ ಅಬ್ದುಲ್ ಅಜೀಜ್ ಮಾತನಾಡಿ ನಮ್ಮ ಸಮಾಜದ ಅಭಿವೃದ್ಧಿ ಕೆಲಸಗಳಿಗೆ ತಮ್ಮ ಸಹಕಾರ ಮುಖ್ಯವಾಗುತ್ತದೆ. ಆದ್ದರಿಂದ ತಾವು ಸಮಾಜದ ಏನೆ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಿ ಎಂದು ಮನವಿ ಮಾಡಿದರು.
ಮುಸ್ಲಿಂ ಧರ್ಮಗುರು ಜಿಲಾನಿ ಖಾಜಿ, ಬಸನಗೌಡ ಪೋಲಿಸ್ ಪಾಟೀಲ್, ಮಲ್ಲಯ್ಯ ಬಳ್ಳಾ, ಅಮರೇಶ ಮಾಟೂರು, ಮಲ್ಲಯ್ಯ ಅಂಬಾಡಿ, ಮೌಲಾಸಾಬ್ ಮೇಸ್ತ್ರಿ, ಬಾಹರಲಿಸಾಬ್, ಡಾ:ಶಫೀ, ದಾದಾಮೀಯಾ ಮಕಾಂದಾರ್, ಚಾಂದ್‍ಪಾಶ ಶೇಡ್ಮೀ, ಶಬ್ಬೀರ್ ಚೌದ್ರಿ, ಅಜ್ಜು ಮೇಕ್ಯಾನಿಕ್, ಯಾಸೀನ್, ಮಹಿಬೂಬ್ ಕುಷ್ಟಗಿ, ಮಹಿಬೂಬ್ ಹಣಿಗಿ ಸೇರಿದಂತೆ ಇತರರು ಇದ್ದರು.