ಶೇಗುಣಸಿಯ ಸಾವಯವ ಬೆಲ್ಲದ ಮನೆ

ಶೇಗುಣಸಿಯ ಸಾವಯವ ಬೆಲ್ಲದ ಮನೆ
(ಅವಿಭಕ್ತ ಕುಟುಂಬದ ಅಪೂರ್ವ ಸಾಧನೆ)

ವರದಿ : ರೋಹಿಣಿ ಯಾದವಾಡ

ವಿಷ ಉಣಿಸದೆ ಅಮೃತ ಉಣಿಸುವೆವು “ ಎನ್ನುವ ಸಂಕಲ್ಪದಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸದೇ, ನೈಸರ್ಗಿಕ ಪದಾರ್ಥ ಬಳಸಿಕೊಂಡು ಸಾವಯವ ಬೆಲ್ಲ ತಯಾರಿಕೆಗೆ ಹುಟ್ಟುಹಾಕಿದ ಘಟಕ. ಒಂದು ಇಂದು ಹಲವಾರು ಆವಿಸ್ಕಾರಗಳನ್ನು ಮಾಡುತ್ತ ಅಪೂರ್ವ ಸಾಧನೆಗೈಯುತ್ತಿದೆ . ಅದುವೇ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಶ್ರೀ ಕಲ್ಮೇಶ್ವರ ಸಾವಯವ ಫಾರ್ಮ ಹೌಸ್.

ಇತ್ತಿಚೆಗೆ ಹಸಿರು ಕ್ರಾಂತಿಯ ನೆಪದಲ್ಲಿ ಬೆಳೆ ಬೆಳೆವ ಮಣ್ಣಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕಬ್ಬು ಬೆಳೆದು ಅದನ್ನು ಸಕ್ಕರೆ ಕಾರ್ಖಾನೆಗೆ ಕಳಿಸುವುದು ಸಾಮಾನ್ಯವಾಗಿದೆ. ಆದರೆ ಅತೀಯಾದ ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರು ಭೂಮಿಯಾಗುತ್ತಿದೆ. ಅಂತಹದರಲ್ಲಿ ಹಲವು ಒಳ್ಳೆಯ ಮನಸ್ಸುಗಳು ಸಾವಯವ ಪದ್ದತಿಯತ್ತ ಮುಖ ಮಾಡಿರುವುದು ಉತ್ತಮ ಬೆಳವಣಿಗೆ. ಕಬ್ಬು ಬೆಳೆದು ಯಾವುದೇ ರಾಸಾಯನಿಕ ಅಥವಾ ಬಣ್ಣ ಉಪಯೋಗಿಸದೇ ಸಾವಯವ ಕಬ್ಬಿನಿಂದ ಬೆಲ್ಲ ತಯಾರಿಸುವಲ್ಲಿ ಮುಂದಾಗಿರುವವರಲ್ಲಿ ಶೇಗುಣಸಿಯ ಈ ಯಲಡಗಿ ಕುಟುಂಬದವರು ಒಬ್ಬರು.

ಈ ಮನೆತನಕ್ಕೆ ಬೆಲ್ಲ ತಯಾರಿಸುವುದು ಹಿರಿಯರ ಕಾಲದಿಂದ ಗೊತ್ತಿರುವ ಕಸುಬು. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಗುವಕ್ಕಿಂತ ಮುಂಚೆ ಒಂದು ಊರಿಗೆ ೫-೬ ಬೆಲ್ಲದ ಮನೆ(ಗಾಣದ ಮನೆ), ಆಲೆಮನೆ ಇರುತ್ತಿದ್ದವು. ಇವುಗಳೆ ಇವರಿಗೆ ಆದಾಯದ ಆಧಾರಗಳು. ಆದರೆ ಈಗ ಒಂದು ಇಲ್ಲದಂತಾಗಿದೆ, ಇದ್ದರೂ ಅದು ರಾಸಾಯನಿಕ ಅಥವಾ ಬಣ್ಣ ಉಪಯೋಗಿಸಿ ಬೆಲ್ಲ ತಯಾರಿಸುವ ಗಾಣದ ಮನೆಗಳು.

ಆಧುನಿಕತೆ ಎಷ್ಟೇ ತೀವೃಗೊಳ್ಳುತ್ತಿದ್ದರೂ, ಸಂಪ್ರದಾಯಕ್ಕೆ ಅಳಿವಿಲ್ಲ ಎಂಬುದು ಸತ್ಯ ಎನ್ನುವುದಕ್ಕೆ ಈ ಸಾವಯವ ಬೆಲ್ಲ ತಯಾರಿಕಾ ಕೇಂದ್ರಗಳು.

ಯಲಡಗಿ ಮನೆತನ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿರುವುದು. ೩೨ ಜನರ ಅವಿಭಕ್ತ ಕುಟುಂಬವಿದು. ಹಿರಿಯರಾದ ಶಿವರಾಯ ಯಲಡಗಿ, ಕೃಷಿ ಪಂಡಿತ ಕಲ್ಮೇಶ ಯಲಡಗಿರವರ ಮಾರ್ಗದರ್ಶನದಲ್ಲಿ ಒಕ್ಕಲುತನ ಮಾಡುತ್ತಿರುವ ಪ್ರತಿಷ್ಠಿತ ಕೃಷಿ ಕುಟುಂಬ.

ಇವರ ತೋಟದಲ್ಲಿ ಕಬ್ಬು ಬೇಸಾಯ:
ತಳಿಗಳು: ಸಿಓ ೮೬೦೩೨, ೧೦೦೦೧, ೯೧೦೧೦, ಓ ೯೨೦೦೫.
೪.೫ ಅಥವಾ ೫ ಫೀಟ್ ಸಾಲಿನಲ್ಲಿ ಕಬ್ಬು ಲಾವಣಿ ಮಾಡಿ, ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕಾಂಪೋಸ್ಟ ಗೊಬ್ಬರ, ಜೀವಾಮೃತ, ಘನ ಜೀವಾಮೃತ, ಗೋಕೃಪಾಮೃತ ಬಳಸಿ ಕಬ್ಬು ಬೆಳೆಯುತ್ತಾರೆ. ಕೃಷ್ಣಾ ನದಿಯಿಂದ ಪೈಪ್ಲೆöÊನ್ ಮೂಲಕ ನೀರಿನ ಆಶ್ರಯ ಹೊಂದಿದ್ದಾರೆ. ಲಾವಣಿ ಮಾಡಿದ ೯-೧೦ ತಿಂಗಳ ನಂತರ ಕಟಾವು ಮಾಡಿ, ತಮ್ಮದೇ ಟ್ರಾö್ಯಕ್ಟರ್ ಮೂಲಕ ಗಾಣದ ಮನೆಗೆ ಸಾಗಿಸುತ್ತಾರೆ. ಇತ್ತಿಚೆಗೆ ಇವರು ಬೆಲ್ಲ ತಯಾರಿಸುವಲ್ಲಿ ತುಂಬ ಹೆಸರುಗಳಿಸಿದ ಕುಟುಂಬ.

ಬೆಲ್ಲ ತಯಾರಿಕೆ:
ಇವರ ಸಾವಯವ ಬೆಲ್ಲ ತಯಾರಿಕೆ ತುಂಬ ಮುತುರ್ವಜಿಯದು. ಅರ್ಧ ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಗಾಣದ ಮನೆಯಲ್ಲಿ ವಿಶೇಷವಾಗಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ.. ಸಾವಯವದಲ್ಲಿ ಬೆಳೆದ ಕಬ್ಬಿನಿಂದ ಕಬ್ಬಿನ ರಸ ತೆಗೆದು ಅದನ್ನು ತುಕ್ಕು ರಹಿತ(ಸ್ಟೆನ್‌ಲೆಸ್ ಸ್ಟೀಲ್) ಟ್ಯಾಂಕ್‌ರ್ ನಲ್ಲಿ ಸಂಗ್ರಹಣೆ ಮಾಡುತ್ತಾರೆ. ಒಂದು ಬಾರಿ ಬೆಲ್ಲ ತಯಾರಿಕೆಗೆ ೧.೮ಟನ್ ಕಬ್ಬು ನುರಿಸಿ, ೧೦೦೦ಲೀ. ಕಬ್ಬಿನ ರಸವನ್ನು ಒಲೆಯ ಮೇಲಿರುವ ತುಕ್ಕು ರಹಿತ ಗಂಗಾಳ(ಅಗಲವಾದ ಕಡಾಯಿ)ಕ್ಕೆ ಸಾಗಿಸುತ್ತಾರೆ. ಅದನ್ನು ಕಬ್ಬಿನ ಒಣಗಿದ ರವದಿ, ಕಬ್ಬಿನ ಸಿಪ್ಪೆಯ ಸಹಾಯದಿಂದ ಕಬ್ಬಿನ ರಸವನ್ನು ಕುದಿಸುತ್ತೇವೆ. ನಂತರ ೪ರಿಂದ ೫ ಬೆಂಡಿ ಗಿಡದ ರಸವನ್ನು ಕಾಯ್ದ ಕಬ್ಬಿನ ರಸಕ್ಕೆ ಸೇರಿಸುತ್ತೇವೆ. ಇದರಿಂದ ಕಬ್ಬಿನ ರಸದಲ್ಲಿರುವ ತ್ಯಾಜ್ಯ ಮೇಲ್ಪದರಕ್ಕೆ ಬಂದು ಸಂಗ್ರಹವಾಗುತ್ತದೆ. ಆದ ಅದನ್ನು ಝಾರಿನ ಸಹಾಯದಿಂದ ಹೊರ ತೆಗೆದು ಕಬ್ಬಿನ ರಸವನ್ನು ಶುದ್ಧಗೊಳಿಸುತ್ತಾರೆ.

ತದನಂತರದಲ್ಲಿ ೧೦೦ ದಿಂದ ೨೦೦ಗ್ರಾಂ (ಕಬ್ಬು ಬೆಳೆದ ಭೂಮಿಗೆ ತಕ್ಕಂತೆ) ಸುಣ್ಣವನ್ನು ಒಲೆಯ ಮೇಲಿರುವ ಕಬ್ಬಿನ ರಸಕ್ಕೆ ಮಿಶ್ರಣ ಮಾಡುವುದರಿಂದ ಬೆಲ್ಲ ಗಟ್ಟಿಗೊಳ್ಳಲು ಸಹಕಾರಿಯಾಗುವುದಲ್ಲದೇ, ಪಿ.ಎಚ್ ಪ್ರಮಾಣ ಸಹ ನಿರ್ವಹಿಸಿದಂತಾಗುತ್ತದೆ. ಕಾಕವಿ ತೆಗೆಯುವ ಮುಂಚೆ ೧೦೦ಮೀ.ಲೀ ಶುದ್ಧ ಶೇಂಗಾ ಅಥವಾ ಕುಸಿಬಿ ಎಣ್ಣೆ ಸೇರಿಸುವುದರಿಂದ ಅಗಲವಾದ ಕಡಾಯಿಯ ತಳ ಹೊತ್ತುವುದಿಲ್ಲ. ಕಬ್ಬಿನ ರಸ ಸು. ೧೦೫-೧೦೮ ಡಿಗ್ರಿ ಸೆಲ್ಸಿಯಸ್ ಕುದಿ ಹೊಂದಿದಾಗ ಬೆಲ್ಲದ ಪಾಕ(ಕಾಕವಿ)ವನ್ನು ಹೊರತೆಗೆಯುತ್ತೇವೆ. ಮುಂದೆ ಕುದಿ ಪ್ರಮಾಣ ೧೧೮-೧೨೦ ಡಿಗ್ರಿ ಬಂದಾಗ ಒಲೆಯ ಮೇಲಿನ ಕಬ್ಬಿನ ರಸವನ್ನು ಕಡಾಯಿಯಿಂದ ಕೆಳಗಿರುವ ಅಗಲವಾದ ತುಕ್ಕು ರಹಿತ ಡೋಣಿಗೆ ಇಳಿಸುತ್ತಾರೆ.

ನಂತರ ಅದನ್ನು ೩-೫ ಬಾರಿ ತಿರುಯುವಿಕೆಯಿಂದ ೭೦ಡಿಗ್ರಿವರೆಗೆ ತಂಪುಮಾಡಿ ಅದನ್ನು ೧ಕೆ.ಜಿ, ೨ಕೆ.ಜಿ ಅಥವಾ ೫ಕೆ.ಜಿ ಬೆಲ್ಲದ ಅಚ್ಚಿಗೆ ತುಂಬಿ ೨ ಗಂಟೆಗಳ ನಂತರ ಹೊರ ತೆಗೆಯುತ್ತಾರೆ.
ಬೆಲ್ಲದ ಪುಡಿ ಮಾಡುವುದಾದರೆ, ಕಬ್ಬಿನ ರಸಪಾಕವನ್ನು ೧೨೨ ಡಿಗ್ರಿ ಗೆ ಕುದಿಸಿ ಇಳಿಸುತ್ತಾರೆ ನಂತರ ಅವನ್ನು ಪುಡಿ ಮಾಡಿ, ಛಾಣಿಸಿ, ಪಾಲಿಥಿನ್ ಪಾಕೆಟ್ನಲ್ಲಿ ಪ್ಯಾಕ್ ಮಾಡುವುದಾಗಿ ಇಂಜನಿಯರಿಂಗ್ ಓದಿದ ಈ ಕುಟುಂಬ ಯುವಕ ಚೇತನ ಹೇಳುವ ವಿಧಾನವಿದು. ಈ ರೀತಿ ತಯಾರಾದ ಬೆಲ್ಲ. ಹಲವಾರು ಕಾರಣಗಳಿಂದ ಅತ್ಯುಪಯುಕ್ತವಾಗಿದೆ ಎಂಬುದರ ಕುರಿತು ತಿಳಿಸುವಂತೆ

ಬೆಲ್ಲದ ಉಪಯೋಗ:
೧. ಸಿಹಿ ವಸ್ತು ರಕ್ತವನ್ನು ಶುದ್ಧಿಕರಿಸುತ್ತದೆ.
೨. ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
೩. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.
೪. ಬೆಲ್ಲ ಹೊಟ್ಟೆಯನ್ನು ತಂಪಾಗಿದುತ್ತದೆ.
೫. ಬೆಲ್ಲದಲ್ಲಿ ಕಬ್ಬಿನಾಂಶ ಇರುವುದರಿಂದ ರಕ್ತಹೀನತೆ ಇರುವವರಿಗೆ ಅತ್ಯುತ್ತಮ.
೬. ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ತಡೆಗಟ್ಟಬಹುದು
೭. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ. ಬೆಲ್ಲ ಮೊಡವೆತನ್ನು ಕಡಿಮೆಗೊಳಿಸಿ, ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.
೮. ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿ ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.
೯. ಬೆಲ್ಲದ ಚೂರು ಬಾಯಿಗೆ ಹಾಕಿಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.
೧೦. ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಿಗ್ಗೆ ಖಾಲೆ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು.
೧೧. ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ. ಮಂಡಿ ನೋವು, ಕೈಕಾಲು ನೋವು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿ.
೧೨. ತಲೆನೋವು ಕಾಣಿಸಿಕೊಂಡರೆ ಒಂದು ಚೂರು ಬೆಲ್ಲ ಆರಾಮಕಾರಿ
೧೩. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲ ಸೇವಿಸುವಿದರಿಂದ ನೋವು ಕಡಿಮೆಯಾಗುತ್ತದೆ.
೧೪) ಮಧುಮೆಹಿಗಳಿಗೆ ಉಪತುಕ್ತ ಬೆಲ್ಲ.‌

ಮಾರುಕಟ್ಟೆ ವ್ಯವಸ್ಥೆ:
ನಾವು ತಯಾರಿಸಿದ ಬೆಲ್ಲ ಮತ್ತು ಬೆಲ್ಲದ ಪುಡಿಯನ್ನು ಸುತ್ತಮುತ್ತಲಿನ ಕಿರಾಣಿ ಅಂಗಡಿ, ಸೂಪರ್ ಮಾರ್ಕೆಟ್‌ಗಳಿಗೆ ಮಾರಾಟ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಹೆಚ್ಚಾಗಿ ಬೆಂಗಳೂರು, ಚೆನೈ, ತುಮಕೂರು, ಮಹಿಬೂಬನಗರ, ಸುರತ್‌ದಂತಹ ನಗರಗಳ ಸಾವಯವ ಮಳಿಗೆಗೆಳಿಗೆ ರೂ.೫೫-೬೦ರೂ ದರದಂತೆ ವಿಆರ್‌ಎಲ್ ಮೂಲಕ ಕಳುಹಿಸಿಕೊಡುತ್ತೇವೆ. ಅಲ್ಲದೇ ಮನೆಗೆ ಬಂದು ಅನೇಕ ಗ್ರಾಹಕರು ಕೊಂಡುಕೊಳ್ಳುತ್ತಾರೆ ಎಂದು ತಿಳಿಸುತ್ತಾರೆ.

*ಇವರ ಇನ್ನೀತರ ಸಾವಯವ* *ಉತ್ಪನ್ನಗಳು* :
ಬೆಲ್ಲ, ಮಸಾಲೆ ಬೆಲ್ಲ(ಶುಂಠಿ ಮತ್ತು ತುಪ್ಪ ಮಿಶ್ರಿತ), ೧೫ಗ್ರಾಂ ತುಂಡು ಬೆಲ್ಲ, ಬೆಲ್ಲದ ಪುಡಿ, ಶೇಂಗಾ ಎಣ್ಣೆ, ಕುಸುಬಿ ಎಣ್ಣೆ, ಕಷಾಯ ಪುಡಿ, ಎನರ್ಜಿ ಬೂಸ್ಟರ್(ಸಿರಿಧಾನ್ಯ, ಎಕದಳ, ದ್ವಿದಳ, ಡ್ರಾಯ್‌ಫ್ರೂಟ್ಸಗಳ ಮಿಶ್ರಣ), ಅರಿಶಿಣ ಪುಡಿ ಮೊದಲಾದವುಗಳು. ಈಚೆಗೆ ಬಿಸ್ಕಿಟ್ ಗಳನ್ನು ಕೂಡ ತಯಾರಿಸಿದ್ದಾರೆ.

ನಿಮಗೂ ಸಾವಯವ ಉತ್ಪನ್ನ ಬೇಕೆ??
ನಮ್ಮ ಮೋಬೈಲ್ ನಂ. ೯೬೮೬೮೫೬೪೧೬, ೯೪೪೮೨೬೪೪೮೦ ಗೆ ಕಾಲ್ ಮಾಡಿ ಅಥವಾ ಮೆಸೆಜ್ ಮೂಲಕ ಆರ್ಡರ್ ಮಾಡಬಹುದು. ನಾವು ನಿಮ್ಮ ಸಮೀಪದ ವಿಆರ್‌ಎಲ್ ಗೆ ೨ದಿನದ ಒಳಗಾಗಿ ಗೆ ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಚೇತನ ಶಿವರಾಯ ಯಲಡಗಿ. ಮೊ: ೯೬೮೬೮೫೬೪೧೬ ಹಾಗೂರೈತ ಸಂಪರ್ಕ:
ಕಲ್ಮೇಶ ಗುರುಪಾದ ಯಲಡಗಿ.
ಸಾ: ಶೇಗುಣಸಿ ತಾ: ಅಥಣಿ ಜಿ: ಬೆಳಗಾವಿ
ಮೋ: ೯೪೪೮೨೬೪೪೮೦ ಇವರನ್ನು ಸಂಪರ್ಕಿಸಬಹುದಾಗಿದೆ.

 

Don`t copy text!