ಬಸವ ಯುಗೋತ್ಸವ
ನುಡಿದ ನಡೆ ನಡೆದ
ಜಗದ ಜ್ಯೋತಿ ಬೆಳಗಿದ,
ಮಾದಿ ರಾಜನ ಮಗ
ಯುಗ ಪುರುಷನಾದ!
ಜನಿಸಿದಾಗ ಬ್ರಾಹ್ಮಣ
ನಡೆದು ಬಂದಾಗ ಜಂಗಮ
ಎಷ್ಟು ಸುಂದರ
ಕೂಡಲ ಸಂಗಮ,
ಆತ ಮಾನವನಲ್ಲ
ಮಾನವ ಧರ್ಮ!
ಕೈಯ್ಯಮುಗಿದ ಬಸವ
ದೇಹದೇಗುಲದ ಬಡವ
ಒಲೈಸಿದ ಶಿವ ಭಕ್ತ,
ಸಾರಿ ಹೋದ ಮನುಕುಲದ ತತ್ವ.
ಸಜ್ಜನಿಕೆಯ ಸಂಗಸಾರ
ಕಿತ್ತೊಗೆದು ಜನಿವಾರ
ವಿಶ್ವವಿಭೂತಿ ಬಸವ
ಆಚರಿಸಿದ ಯುಗೋತ್ಸವ!
–ಫರ್ಹಾನಾಜ್ ಮಸ್ಕಿ
ಸಹಾಯಕ ಪ್ರಾಧ್ಯಾಪಕರು