ಸಹಾಯಕ ಆಯುಕ್ತರ ನೆತೃತ್ವದಲ್ಲಿ ವಿಕಲ ಚೇತನರ ಕುಂದು ಕೊರತೆಗಳ ಸಭೆ

ವರದಿ ವೀರೇಶ ಅಂಗಡಿ ಗೌಡೂರು

e -ಸುದ್ದಿ ಲಿಂಗಸುಗೂರು

ಲಿಂಗಸುಗೂರು ತಾಲೂಕಿನ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಲೂಕ ಮಟ್ಟದ ವಿಕಲಚೇತನರ ಕುಂದುಕೊರತೆಗಳ ಸಭೆಯನ್ನು ಸಹಾಯಕ ಆಯುಕ್ತರ ಕಛೇರಿಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ವಿಕಲಚೇತನರ ಮಾಶಾಸನ, ಉದ್ಯೋಗ ಖಾತ್ರಿ ಯೋಜನೆ, ಪುರಸಭೆ, ತಾಲೂಕ ಪಂಚಾಯಿತ ಮತ್ತು ಗ್ರಾಮ ಪಂಚಾಯತಿಗಳಲ್ಲಿ ವಿಕಲಚೇತನರ ಶೇ. 5 ರಷ್ಟರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಆಗುತ್ತೀರುವ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಯಿತು.
ಅಂಗವಿಕಲರ ಸಂಘದ ಮುಖಂಡರು ಮಾತನಾಡಿ ಲಿಂಗಸುಗೂರು ಮತ್ತು ಮಸ್ಕಿ ತಾಲೂಕಿನಲ್ಲಿ ಅಂಗವಿಕಲರಿಗೆ ಸರಿಯಾಗಿ ಮಾಶಾಸನ ನಿಡುತ್ತಿಲ್ಲ. ವಿವಿಧ ಸೌಲಭ್ಯಗಳನ್ನು ಪಡೆಯಲು ಮಾಹಾತಿಗಾಗಿ ಕಛೇರಿಗೆ ಭೇಟಿ ನಿಡಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಹಾಗೂ ಅವರ ಕುಟುಂಬ ವರ್ಗದವರು ತಪಾಸಣೆಗೆ ಹೊದರೆ ಹಣ ನೀಡಿದವರಿಗೆ ಮಾತ್ರ ಚಿಕಿತ್ಸೆ ನಿಡುತ್ತಿದ್ದಾರೆಂದು ಅಲ್ಲದೆ ತಾಲೂಕಿನಲ್ಲಿ ನಕಲಿ ವಿಕಲಚೇತನರು ಹೆಚ್ಚಾಗಿದ್ದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹುಂಬಣ್ಣ ರಾಥೋಡ್, ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕರಾದ ಮಂಜುನಾಥ ಜಾವೂರ. ಲಿಂಗಸುಗೂರು ಪುರಸಭೆಯ ರಾಜಗೋಪಾಲ್, ಸಾಮಾಜ ಕಲ್ಯಾಣ ಇಲಾಖೆಯ ಅಜ್ಮೀರ್ ಸಾಬ,ವಿಕಲಚೇತನರ ತಾಲೂಕ ನೋಡಲ್ ಅಧಿಕಾರಿಗಳಾದ ವಿರೂಪಾಕ್ಷಯ್ಯ ಹಿರೇಮಠ, ಸಮನ್ವಯ ಶಿಕ್ಷಣಾಧಿಕಾರಿ ಹವಾಲ್ದಾರ್. ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿಯ ರಾಜ್ಯ ಕಾರ್ಯದರ್ಶಿಯಾದ ಸುರೇಶ ಪಿ ಭಂಡಾರಿ ಮುದಗಲ್,ರಾಜ್ಯ ನಿರ್ದೆಶಕರಾದ ನಿಂಗನಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಅಂಗವಿಕಲರ ಸಂಘದ ಮುಖಂಡರು ಉಪಸ್ಥಿತರಿದ್ದರು.

Don`t copy text!