ತಾಯಿಯ ಮಡಿಲು
ಸಹ್ಯಾದ್ರಿಯ ಮಡಿಲಿಗಿಂತಲೂ ಸುಂದರ
ನನ್ನ ತಾಯಿಯ ಮಡಿಲು
ಅಲ್ಲಿ ಭೂರಮೆಯ ಸೊಬಗು
ಇಲ್ಲಿ ನನ್ನ ಹೆತ್ತವ್ವನ ಉಡಿಯ ಸೊಬಗು…
ಅವನಿಜೆಯ ಗರ್ಭದಲ್ಲಿ ಹುದುಗಿ
ಬೆಳೆದಿದೆ ಜಗದ ಪೋಷಣೆ
ಹೆತ್ತವ್ವನ ಉಡಿಯೊಳಗೆ ಬೆಳೆಯುತ್ತಿದೆ ನನ್ನ ಸಂರಕ್ಷಣೆ….
ಮುಂಗಾರು ಮಳೆ ಬಂದು ಬೆಳೆದು
ನಿಂತಿವೆ ಹೊನ್ನ ಕುಡಿಗಳು
ತಾಯ ಒಡಲಲ್ಲಿ ಮೊಳಕೆಯೊಡೆದಿದೆ
ತನ್ನೊಲವ ಕುಡಿಗಳು..
ಚೊಚ್ಚಲ ಹೆರಿಗೆಯ ಬೇನೆ
ನನ್ನವ್ವನ ಉದರದೊಳಗೆ
ಹೊರಬಂದು ಬೆಚ್ಚನೆ ಮಲಗಿದೆ
ಅವಳ ಮಡಿಲೊಳಗೆ….
–ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ
.