ಉಡುತಡೆಯ
ಅಕ್ಕಮಹಾದೇವಿ
ಉಪಮಾತೀತ ಅನುಪಮ ಶರಣೆಯಿವಳು
ಉಡುತಡೆಯ ಅಕ್ಕಮಹಾದೇವಿಯಿವಳು
ಆಸೆಯ ಪಾಷವನೇ ಕಿತ್ತೊಗೆದ ವನಿತೆಯಿವಳು
ಕರ್ನಾಟಕದ ಪ್ರಥಮ ವಚಣಕಾರ್ತಿಯಿವಳು ////….
ಹನ್ನೆರಡನೆಯ ಶತಮಾನದ ಶರಣೆಯಿವಳು
ನಿರ್ಮಲಶೆಟ್ಟಿ ಸುಮತಿಯ ಕುವರಿಯಿವಳು
ಕೇಶವನ್ನೇ ಮೈಮೇಲೆ ಹೊದ್ದು ಸಂಚಾರಿಸಿದಳು
ದಿಟ್ಟ ದಿವ್ಯ ಚೇತನದ ದಿಗಂಬರೆ ಯಿವಳು ////…..
ಮದುವಣಗಿತ್ತಿಯಾಗಿ ಬರಬೇಕಾದವಳು
ಶರತ್ತಿಗೆ ಸೋತ ಕೌಶಿಕರಾಜನ ತೊರೆದವಳು
ಉಟ್ಟಬಟ್ಟೆಯಲಿ ಮನೆ ಬಿಟ್ಟು ಬಂದವಳು
ಸಂಪೂರ್ಣ ಲೌಕಿಕ ಬಂಧನ ತೊರೆದವಳು ////…….
ಅರ್ಥಪೂರ್ಣ ವಚನಗಳ ಜಗಕೆ ಕೊಟ್ಟವಳು
ಅಲ್ಲಮಪ್ರಭುವನೆ ಮೀರಿಸಿದ ಅಕ್ಕಯಿವಳು
ಚೆನ್ನಮಲ್ಲಿಕಾರ್ಜುನ ಪತಿಯೆoದು ಸಾರಿದಳು
ಗಂಡುಹೆಣ್ಣೆoಬ ಬೇಧ ತೊಡೆದು ಹಾಕಿದಳು ////……
ಹರನೆ ಗಂಡನಾಗಬೇಕೆoದು ಬಯಸಿದಳು
ಕನಸಿನಲ್ಲಿ ದೇವ ಮಲ್ಲಿಕಾರ್ಜುನನ ಕಂಡವಳು
ಅರಸುತ್ತ ಅರಸುತ್ತ ಶ್ರೀಶೈಲ ಗಿರಿಗೆ ಬಂದವಳು
ಕದಳಿಯಲಿ ಕರ್ಪೂರದಂತೆ ಲೀ ನವಾದಳು ////…….
–ಶ್ರೀಮತಿ ರೇಖಾ ವಡಕಣ್ಣವರ್