ಆಯ್ಕೆ ಮತ್ತು ಪ್ರಯತ್ನ

ಜೀವನ್ಮುಖಿ
ಇಂಚಿಂಚೂ ಅವಲೋಕನ….

ಆಯ್ಕೆ ಮತ್ತು ಪ್ರಯತ್ನ

ಆಯ್ಕೆ ಎಂದರೆ ನಾವು ಆರಿಸಿಕೊಳ್ಳುವುದು. ಸಾಮಾನ್ಯವಾಗಿ ದೈನಂದಿನ ಊಟ, ತಿನಿಸು, ಬಳಸುವ ಸಾಮಾನುಗಳಲ್ಲೂ ಆಯ್ಕೆ ಇದ್ದರೂ ನಮ್ಮ ಓದು, ವೃತ್ತಿ, ಪ್ರವೃತ್ತಿ, ಸ್ನೇಹಿತರು ಎಲ್ಲಕ್ಕೂ ಮಿಗಿಲಾಗಿ ಜೀವನದ ಮಾರ್ಗ ಮತ್ತು ಸಂಗಾತಿಯ ಆಯ್ಕೆ ಮಹತ್ವದ್ದಾಗಿರುತ್ತದೆ.

ಸರಿಯಾದ ಆಯ್ಕೆ ಮಾಡಿಕೊಂಡಲ್ಲಿ ಜೀವನ ಸುಲಭ. ಸಾಮಾನುಗಳು, ಊಟ, ತಿನಿಸು, ಪ್ರಯಾಣ ಇವುಗಳ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಳ್ಳ ಬಹುದು ಆದರೆ ಓದು ಆರಿಸಿ ಕೊಂಡ ಮೇಲೆ ಅದಕ್ಕೆ ಬದ್ಧತೆ ಇರಬೇಕು ಹಾಗೆ ಕೆಲಸ ಎಲ್ಲಕ್ಕೂ ಕೂಡ ನಮ್ಮ ಬದ್ಧತೆ ಮುಖ್ಯ.

ಆಯ್ಕೆ ಮಾಡಿಕೊಂಡ ಮೇಲೆ ಕೆಲಸ ಮುಗಿಯುವುದಿಲ್ಲ. ಜೀವನ ಸುಖಿಯಾಗಲು ನಮ್ಮ ಪ್ರಯತ್ನ ಬಹಳ ಮುಖ್ಯ. ನಾವು ಏನೇ ಆಯ್ದು ಕೊಳ್ಳಲಿ ಅದರ ಬಗೆಗೆ ನಮ್ಮ ಪ್ರೀತಿ ಪಡೆಯಲು ಮತ್ತು ಕಾಯ್ದುಕೊಳ್ಳಲು ನಮ್ಮ ಪ್ರಯತ್ನ ಮುಖ್ಯ.

ಪ್ರಯತ್ನ ಹೇಗೆ ಇರಬೇಕು ಎಂದರೆ ಅದನ್ನು ಬಿಟ್ಟು ಬೇರೆ ಯಾವ ವಿಕಲ್ಪವೂ ಇಲ್ಲ ಎಂಬಂತೆ ಮಾಡಬೇಕು. ಕೆಲಸ ನನಗೆ ಸಿಕ್ಕಿದೆ/ಸಿಗುತ್ತದೆ ಎಂಬಂತೆ ಮಾಡಿದಾಗ ಯಶಸ್ಸು ದೊರೆಯುತ್ತದೆ. ನಾಳೆ ಎಂಬುದು ಇಲ್ಲವೇ ಇಲ್ಲ ಇಂದೇ ಕೊನೆ ಎನ್ನುವ ಭಾವನೆಯಿಂದ ಕೆಲಸ ಮಾಡುವಾಗ ಪ್ರಯತ್ನ ಸಫಲವಾಗಿ ಯಶಸ್ಸು ದೊರೆಯುವುದು.

ನಮ್ಮ ಆಯ್ಕೆಯನ್ನು ಪಡೆಯುವುದಕ್ಕೆ ಪ್ರಯತ್ನ ಪಟ್ಟು ಯಶಸ್ಸು ಪಡೆಯುವುದು ನಮ್ಮ ಗುರಿಯಾಗಿರಬೇಕು. ಆಯ್ಕೆ ಮತ್ತು ಆಯ್ಕೆಯನ್ನು ಪಡೆಯುವ ಪ್ರಯತ್ನ ಜೊತೆ ಜೊತೆಗೆ ನಡೆಯಬೇಕು. ಕಂಡ ಕನಸುಗಳು ನನಸಾಗಲು ನಿದ್ದೆಯೇ ಇಲ್ಲದೇ ಶ್ರಮಿಸಿದಾಗ ಸಾಧ್ಯವಾಗುತ್ತದೆ.

ಕಂಡ ಕನಸೆಲ್ಲವೂ ಕೆಲವೊಮ್ಮೆ ನನಸಾಗುವುದಿಲ್ಲ ಅದಕ್ಕೆ 2 ಕಾರಣ ಇರಬಹುದು. ಒಂದು ನಮ್ಮ ಸಾಮರ್ಥ್ಯದ ಮೌಲ್ಯಮಾಪನ ನಾವು ಮಾಡಿಕೊಳ್ಳದೆ ಇರಬಹುದು, ಇನ್ನೊಂದು ನಾವು ಬಯಸಿದ್ದು ನಮಗೆ ಯೋಗ್ಯ ಇಲ್ಲದೇ ಇರಬಹುದು. ಪ್ರಯತ್ನಕ್ಕೆ ಫಲ ದೊರೆಯದೆ ಇದ್ದಾಗ ಆಯ್ಕೆಯನ್ನು ಬೈದು ಕೊಳ್ಳಬಾರದು.

ನಮ್ಮ ಗುರಿ ಪ್ರಯತ್ನಕ್ಕೆ ಸತತವಾಗಿ ಪ್ರಯತ್ನಿಸುವುದು ಮತ್ತು ನಮಗೆ ಯೋಗ್ಯ ಆಯ್ಕೆಯನ್ನು ಮಾಡಿ ಕೊಂಡು ಗುರಿ ಹೊಂಡುವುದು ಜೀವನದ ಪ್ರತಿ ಹಂತದಲ್ಲೂ ಅವಶ್ಯಕ.

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!