ಕಿರಿಯ ಆರೋಗ್ಯ ಸಹಾಯಕರಿಗೆ ಬಿಳ್ಕೊಡಿಗೆ

ಕಿರಿಯ ಆರೋಗ್ಯ ಸಹಾಯಕರಿಗೆ ಬಿಳ್ಕೊಡಿಗೆ

ವರದಿ- ವೀರೇಶ ಅಂಗಡಿ ಗೌಡೂರು

e-ಸುದ್ದಿ ಲಿಂಗಸುಗೂರು

ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಏಳು ವರ್ಷಗಳಿಂದ ಕಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ಖಲೀಲ್ ಅಹ್ಮದ್ ಅವರು ಕೆಂಭಾವಿ ಆರೋಗ್ಯ ಕೇಂದ್ರಕ್ಕೆ ಮಲೇರಿಯಾ ನಿಯಂತ್ರಣ ಘಟಕಕ್ಕೆ ವರ್ಗಾವಣೆಗೊಂಡ ಪ್ರಯುಕ್ತ ಗುರುಗುಂಟಾ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಿಂದ ಬಿಳ್ಕೊಡಿಗೆ ಸಮಾರಂಭ ನಡೆಯಿತು.

ವರ್ಗಾವಣೆಗೊಂಡ ಖಲೀಲ್ ಅಹ್ಮದ್ ಅವರು ಮಾತನಾಡಿ ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ಗೌಡೂರು,ಗೌಡೂರು ತಾಂಡಾ,ಬೆಂಚಲದೊಡ್ಡಿ,ಹೊಸಗುಡ್ಡ ,ಕೋಠಾ, ಗ್ರಾಮಗಳಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ಸೇವೆ ಸಲ್ಲಿಸಿದ್ದು ತೃಪ್ತಿ ತಂದಿದೆ. ನನ್ನ ವರ್ಗಾವಣೆ ನಿಮಿತ್ತ ಬಿಳ್ಕೊಡುತ್ತಿರುವ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ ವಿಕ್ರಂ ಪಾಟೀಲ್, ಡಾ.ಅಭಿಜಿತ್ ನಾಯಕ, ಸಿಬ್ಬಂದಿಗಳಾದ ಪ್ರಕಾಶ,ಮಂಜುನಾಥ, ಬಾಬಣ್ಣ,ಗುರುರಾಜ,ರಮೇಶ,ವಿಶ್ವನಾಥ ಸಿಂಗ್,ರಿಯಾನ, ಮಹೇಶ್ವರಿ,ಮುಬಿನಾ ಬೇಗಂ, ಶಿವಲೀಲಾ,ಪ್ರಿಯಾಂಕ, ಸುಜಾತಾ,ಗೀತಾ ಸೇರಿದಂತೆ ಮಾಣಿಕ ಪ್ರಭು, ಸುನೀಲ್ ಸಿಂಗ್ ಉಪಸ್ಥಿತರಿದ್ದರು.

Don`t copy text!