ಕಟು ಮೌನ…

ಕಟು ಮೌನ…

ಅದೇಕೋ ಎಲ್ಲೆಡೆ
ನೀರವ ಮೌನ..
ಅನೀತಿ ಮೋಡದ ಮರೆಯಲಿ
ನೀತಿ ಸೂರ್ಯನ ಮೌನ
ಕತ್ತಲೆಗೆ ಬೆತ್ತಲೆ ಮೌನ
ಶೋಷಣೆ ಅತ್ಯಾಚಾರಕೆ
ಕಣ್ಮುಚ್ಚಿದ ಮೌನ..
ರಕುತದ ಕಂಬನಿಗಳಿಗೆ
ಹೃದಯವದು ಮೌನ
ಜೀವಂತ ದಫನ್ ಗಳಿಗೆ
ಗೋರಿಗಳೂ ಮೌನ..
ಮತೀಯ ಕಲಹಗಳಿಗೆ
ವಿವೇಕದ ಮೌನ
ದ್ವೇಷದ ದಳ್ಳುರಿಗೆ
ಶಾಂತಿಯ ಗಾಢ ಮೌನ..
ಬರ್ಬರ ಕೃತ್ಯಗಳಿಗೆ
ಮಾನವೀಯತೆಯ ಮೌನ..
ಮುರಿಯಬೇಕಿದೆ ಕಟು ಮೌನ
ಬುದ್ಧ ಬಸವ ತೋರಿದ
ಸ್ನೇಹ ಪ್ರೇಮದ ಬಂಧುರದಿಂದ…

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!