ಪ್ರೀತಿಯ ಸುತ್ತ….
ನಿನ್ನೆ ಸಂಜೆ ಮನೆಗೆ ಹೋಗುತ್ತಿದ್ದಾಗ sharing ಆಟೋ ಚಾಲಕ ಮತ್ತು ಅವನ ಹುಡುಗಿ ಮಾತು. ನಮಗೆ ನಗು ತರಿಸಿದರೂ ಪ್ರೀತಿಯ ಅಸುರಕ್ಷಿತತೆ soft ware ಇಂಜಿನಿಯರ್, ಆಟೋ ಚಾಲಕ, ಟೀಚರ್, ಯಾವುದೇ ಕೆಲಸದ ಮತ್ತು ಯಾವುದೇ ವರ್ಗದ ವ್ಯಕ್ತಿ ಇರಲಿ ಅವರನ್ನು ಕಾಡುತ್ತದೆ ಎಂಬ ವಿಷಯವನ್ನು ಖಚಿತ ಪಡಿಸಿತು
ಪ್ರೀತಿ ಪ್ರೇಮಕ್ಕೆ ವಯಸ್ಸು, ಲಿಂಗ, ವರ್ಗ, ಉದ್ಯೋಗ ಸಂಬಂಧ ಇರುವುದಿಲ್ಲ. ಮದುವೆ ಅದ ಮೇಲೆ ಬೇಕೋ ಬೇಡವೋ ಪ್ರೀತಿ ಇದೆಯೋ ಇಲ್ಲವೋ ಜೊತೆಗೆ ಇರುತ್ತಾರೆ. ಆದರೆ ಈ ಪ್ರೀತಿ ನಂಬಿಕೆ ಮತ್ತು ಅಪನಂಬಿಕೆಗಳ ತೋಳಲಾಟ. ಅದರಲ್ಲಿ ಇತ್ತೀಚಿಗೆ ಮೋಸಗಾರರೇ ಜಾಸ್ತಿ ಇರುವ ಕಾರಣ ಹುಡುಗ/ಹುಡುಗಿ ಯಾರೇ ಮಾತನಾಡುವುದು ಬಿಟ್ಟರೆ ಭಯ ಆಗುತ್ತದೆ.
ನಡೆದ ಘಟನೆ ಏನೆಂದರೆ ಆಟೋ ಡ್ರೈವರ್ ಪ್ರಿಯತಮೆ ಕೈ ಕತ್ತರಿಸಿಕೊಂಡು ಆತ್ಮ ಹತ್ಯೆ ಪ್ರಯತ್ನ ಮಾಡಿದ್ದಳು. ಆ ಹುಡುಗ ಸಮಾಧಾನ ಮಾಡುತ್ತಿದ್ದ. ಆ ಹುಡುಗ 2-3 ದಿನದಿಂದ ಹುಡುಗಿಯ ಕರೆ ಸ್ವೀಕರಿಸದೆ ಇದ್ದಿದ್ದು ಸಮಸ್ಯೆಗೆ ಕಾರಣವಾಗಿತ್ತು.
ಹರೆಯ ಇರಲಿ ನಡುವಯಸ್ಸು ಇರಲಿ, ಮದುವೆ ಮೊದಲಿನ ಪ್ರೀತಿ ಇರಲಿ ನಂತರದ ಪ್ರೀತಿ ಇರಲಿ, ವಿಚ್ಚೇದಿತರ/ವಿಧುರ/ವಿಧವೆಯ ಪ್ರೀತಿ ಇರಲಿ, ಈ ರೀತಿ ಭಯ ಆಗುವುದು ಸಹಜ. ಅದರಲ್ಲೂ online ಕಂಡೂ ಮಾತಾಡದೇ ಇದ್ದಾಗ ಬೇರೆ ಕಡೆ ಆಕರ್ಷಿತರಾಗಿ ನಿರ್ಲಕ್ಷ ಮಾಡುತ್ತಿದರೆಂಬ ಅಂಜಿಕೆ ತಲೆಯನ್ನು ಬುದ್ದಿವಂತಿಕೆಯನ್ನು ನಿಷ್ಕ್ರಿಯಮಾಡಿ ಬಿಟ್ಟಿರುತ್ತದೆ. ಮನುಷ್ಯನ ಅತ್ಯಂತ ನಾಜುಕು ವಿಷಯವೆಂದರೆ ಪ್ರೀತಿ ಆದ್ದರಿಂದ ಹುಡುಗ/ ಹುಡುಗಿ ಯಾರೇ ಇರಲಿ ಪ್ರೀತಿಯನ್ನು ಮಾಡುವಾಗ ಯೋಚಿಸಿ ಮಾಡಿ, ಪ್ರೀತಿ ಮಾಡುವಾಗ ನಂಬುವುದನ್ನು ಕಲಿಯಿರಿ.
ಒಂದು ಪಕ್ಷ ಪ್ರೀತಿಯಲ್ಲಿ ಮೋಸವಾದರೂ ಧೈರ್ಯ ಕೆಡಬೇಡಿ. ನಿಮ್ಮ ಹೆತ್ತು ಹೊತ್ತು ಸಾಕಿದ ತಂದೆ ತಾಯಿ
ಗಳಿಗಾಗಿ ಬದುಕಿ. ಸಾಯುವುದು ಯಾವುದೇ ವಿಷಯದ ಪರಿಹಾರವಲ್ಲ. ದಾಸರು ಹೇಳಿದಂತೆ ಇಸಬೇಕು ಇದ್ದು ಜಯಿಸವೇಕು.
ಪ್ರೀತಿ ಎಲ್ಲಾ ವಯಸ್ಸಿನವರಿಗೂ ಬೇಕೇ ಬೇಕು. ಆದರೆ ಪ್ರೀತಿ ಇಲ್ಲದೇ ಬದುಕೇ ಇಲ್ಲ ಅನ್ನುವುದು ಸುಳ್ಳು. ಗಾಳಿ ನೀರು ಊಟ ಎಲ್ಲಕ್ಕೂ ಹೆಚ್ಚಿಗೆ ಭಗವಂತನ ಅನುಗ್ರಹ ಇಲ್ಲದೇ ಜೀವ ಉಳಿಯುವುದಿಲ್ಲ. ಆತ್ಮ ಹತ್ಯೆ ಪಾಪ ಎನ್ನುವುದು ಭಗವಂತನನ್ನು ನಂಬುವವರ ವಾದವಾದರೆ, ನಾಸ್ತಿಕರು ಕೂಡ ಆತ್ಮ ಹತ್ಯೆ ಹೇಡಿತನ ಎನ್ನುತ್ತಾರೆ.
ಯಾರೇ ಇರಲಿ ಸಾಯಲಿ ಜೀವನ ಎದುರಿಸಲೇ ಬೇಕು. ಎಲ್ಲರೂ ಸಾಯುವಂತೆ ನಾವೂ ಕೂಡ ಒಮ್ಮೆ ಸಾಯಲೇ ಬೇಕು. ಆದರೆ ನಾವಾಗಿ ಆತ್ಮ ಹತ್ಯೆ ಮಾಡಿಕೊಳ್ಳ ಬಾರದು. ಪ್ರೀತಿ ಹದಿ ವಯಸ್ಸಿನಲ್ಲಿ ಯೌವ್ವನದಲ್ಲಿ ಸಹಜ ನಿಜವಾದ ಪ್ರೀತಿ ಆಗಿದ್ದರೇ, ನಿಮ್ಮದೇ ಆಗಿದ್ದರೆ ಸಿಕ್ಕೇ ಸಿಗುತ್ತದೆ. ಇಂತಹ ಶಾಂತ ವಿಚಾರಗಳು ಯೌವ್ವನದಲ್ಲಿ ಬರದೇ ಇದ್ದರೂ ಆತ್ಮೀಯ ಹಿರಿಯರಲ್ಲಿ ಹೇಳಿ ಕೇಳಿ ಪ್ರೀತಿ ಸುತ್ತಾ ಬದುಕಿ.
–ಮಾಧುರಿ ದೇಶಪಾಂಡೆ ಬೆಂಗಳೂರು