ಪರಿಮಳ

ಪರಿಮಳ

ಮುಂಗಾರು ಮಳೆಯ
ಮೊದಲ ಹನಿ ಬಿದ್ದಾಗ
ಮಣ್ಣಿನ ವಾಸನೆಯ ಪರಿಮಳವ
ಯಾರಿಗೆ ಹೋಲಿಸಲಿ ನಾನು…

ಭೂಮಿಗೆ ಬಿದ್ದ ಮೊದಲ ಬೀಜ
ಮೊಗ್ಗಾಗಿ ಹೂ ಅರಳಿದಾಗ
ಆ ಪರಿಮಳದ ಕಂಪಿಗೆ
ದುಂಬಿಯ ಸಾಲ ನೋಡಿರುವೆ ನಾನು…

ಚೈತ್ರ ಮಾಸದಲ್ಲಿ ಮಾವು ಬೇವುಗಳ
ಪಲ್ಲವಿಸಿದ ತಳಿರ ಕಂಪು ಇಂಪಿನ ಪರಿಮಳ ಸೂಸುವ
ಹೂಗಳ ಹೇಗೆ ಬಣ್ಣಿಸಲಿ ನಾನು..

ನಲ್ಲೆಯ ನೋಟ,ಮೈಮಾಟ
ನಗು ಮೊಗದ ಸುಂದರಿಯ
ತುರುಬಿಗೆ ಸುತ್ತಿದ ಮೊಗ್ಗು ಮಲ್ಲಿಗೆಯ
ಪರಿಮಳಕೆ ಸೋತಿರುವೆ ನಾನು…

ತರತರದ ಅಡುಗೆಯ ಭಕ್ಷ ಭೋಜನದ
ಪರಿಮಳವ ಆಘ್ರಾಣಿಸಿ ವ್ಯಂಜನದ
ಸವಿರುಚಿಯ ಹೇಗೆ ಮರೆಯಲಿ ನಾನು..

ಅಂದು ಚೆಂದದ ಬೀಡು
ಶ್ರೀಗಂಧದ ಕಂಪ ಸೂಸುವ ನಾಡು
ಕನ್ನಡದ ಸೊಬಗಿನ ಪರಿಮಳಕ್ಕೆ
ಸೋಲದವರು ಯಾರು…

ನಿಸರ್ಗದ ಚೆಲುವಿಗೆ ಎಲ್ಲಾ
ಪರಿಮಳವನ್ನು ಧಾರೆ ಎರೆದು
ಸುಗಂಧವನ್ನು ಪಸರಿಸಿದ ಆ
ದೇವರನ್ನು ಏನಂತು ವರ್ಣಿಸಲಿ ನಾನು…

ಗೀತಾ.ಜಿ.ಎಸ್
ಹರಮಘಟ್ಟ ಶಿವಮೊಗ್ಗ

Don`t copy text!