ಪರಿಮಳ

ಪರಿಮಳ

ಬ್ರಾಹ್ಮಿ ಮುಹೂರ್ತದಲಿ
ಧೂಪ ದೀಪ ನೈವೇದ್ಯಗಳ
ಮಂದ ಮಂದ ಪರಿಮಳದಲಿ
ನನ್ನನರ್ಪಿಸುತ ಮೈ ಮರೆತೆ

ಶ್ರೀಗಂಧದ ಸುಗಂಧಕೆ
ಕಾಶಿವಿಭೂತಿ ಲೇಪನಕೆ
ಪಂಚಾಮೃತ ಅಭಿಷೇಕಕೆ
ಪುಟ್ಟ ಶಿವ ಓಡೋಡಿ ಬಂದ

ತೃಪ್ತಿಯ ಬದುಕಿನ ಪರಿಮಳ
ಮಲ್ಲಿಗೆ ಸಂಪಿಗೆ ಅರಳಿ
ನಕ್ಕಾಗ ದೇವ ನಕ್ಕ ಹೊರಳಿ
ಜೀವನ ಸಾರ್ಥಕವೆಂದ ಮರಳಿ

ನನ್ನಡುಗೆ ಅರಮನೆಯಲಿ
ಘಮ ಘಮಿಸುವ ಅನ್ನ
ಸಾರು ಪಲ್ಯಗಳ ಸಾತ್ವಿಕ ಆಹಾರಕೆ
ತೃಪ್ತಳಾದಳು ಅನ್ನಪೂರ್ಣೆ

ಎಲ್ಲ ಸ್ವೀಕರಿಸುವ ನಾಸಿಕ
ಶರೀರ ಮನದ ನಾಯಕ
ಕಂಪಿನಿಂದ ತಂಪಾಗಿಸುವದು
ಧನ್ಯವಾದ ಮುದ್ದಾದ ಮೂಗಿಗೆ.

ಅನ್ನಪೂರ್ಣ ಸು ಸಕ್ರೋಜಿ
ಪುಣೆ

Don`t copy text!