ಶರಣಾಗು ಮಾನವೀಯತೆಗೆ

ಶರಣಾಗು ಮಾನವೀಯತೆಗೆ

ಹುಟ್ಟು ನಿಶ್ಚಿತ ಸಾವು ಖಚಿತ
ಭೂತಕಾಲ ಉರುಳಿದೆ
ವರ್ತಮಾನ ಅಸ್ಥಿರವಿದೆ
ಭವಿಷ್ಯವು ಕೈಯಲಿಲ್ಲ
ವ್ಯರ್ಥಮಾಡದೆ ಸಮಯವ
ಶರಣಾಗು ಮಾನವೀಯತೆಗೆ

ಕೋಟಿಸಂಪತ್ತು, ಖ್ಯಾತಕಂಪನಿ
ಅಪಾರ್ಟ್ಮೆಂಟುಗಳು
ತೋಳ್ಬಲ, ಜನಬಲ, ಹಣಬಲ, ಪ್ರಕೃತಿ,
ವೈರಾಣು ಮುನಿಸಿಗೆ
ಸಮಾದಿಯಾಗಲಿವೆ ಪ್ರವಾಸ,
ತೀರ್ಥಯಾತ್ರೆಗಳಿಂದ ಸುಸ್ತಾಗಿವೆ
ಮನತುಂಬ ಒತ್ತಡ ಗೊಂದಲ ಗೂಡಾಗಿದೆ
ಶರಣಾಗು ಮಾನವೀಯತೆಗೆ

ಬಂಧುಗಳ ಬಣ್ಣಬಯಲಾಗಿದೆ
ಗೆಳೆತನದ ನಂಬಿಕೆ ಅಳಿದಿದೆ
ಸಂಬಂಧಗಳ ಸವೆದುಸುಳಿಯಂತಾಗಿವೆ
ಸಂಸಾರ ಮೌಲ್ಯಕಳೆದುಕೊಂಡಿವೆ
ಉದ್ಯೋಗ, ವ್ಯಾಪಾರ ಪೈಪೋಟಿಗಿಳಿದಿವೆ
ಕೂಟಗಳು, ಸಮಿತಿಗಳಲಿ ವಿಶ್ವಾಸವಿಲ್ಲವಾಗಿದೆ
ಶರಣಾಗು ಮಾನವೀಯತೆಗೆ

ದೇಹವು ರೋಗಗಳ ಪಂಜರ
ಮಕ್ಕಳು ನಿಯಂತ್ರಣದಲ್ಲಿಲ್ಲ ಯಾರಿಗೆ ಯಾರು?
ಪುಣ್ಯದ ಇನ್ಶೂರೆನ್ಸ್ ಮಾಡಲು
ಈ ನೆಲದ, ಸಮಾಜದ, ಜೀವ ಸಂಕುಲದ
ಋಣ ತೀರಿಸಲು, ಜೀವನಪಾವನಗೊಳಿಸಲು
ಪರೋಪಕರಾರ್ಥಂ ಇದಂ ಶರೀರಂ
ಸಾರ್ಥಕವಾಗಲು
ಶರಣಾಗು ಮಾನವೀಯತೆಗೆ

ಶ್ರೀಮತಿ ರೇಖಾ  ವಡಕಣ್ಣವರ್
ಲಕ್ಷ್ಮೇಶ್ವರ

Don`t copy text!