ಹರಕೆ

ಹರಕೆ

ಎಲೆ ಕಡಲೆ
ನಿನ್ನ ವಿಶಾಲ ವ್ಯಾಪ್ತಿಯ
ಹರಿವಿಕೊಂಡ ಆಳಕ್ಕೆ
ನನ್ನ ಮನ ತುಂಬಿದ
ಹರಕೆ ನಿನಗೆ
ನಿನ್ನಷ್ಟೆ ಆಳದ ಸಂತಸ
ನಿನಗೆ ನೀಡ ಬೇಕೆಂದು
ಬಯಸುವೆ ತಾಯೆ
ನಿನ್ನ ಸುಂದರ ಆತ್ಮ
ಹೊರಗೆ ಬೆಳಕು ಚೆಲ್ಲಿದ
ನಿನ್ನ ನೀಲಿ ಕಣ್ಣು
ಎಲ್ಲವನ್ನೂ ನಿನಗೆ
ಹೇಳ ಬೇಕೆಂದಿರುವೇ
ಶುಭ ಕೊರಬೇಕೆನ್ನುತ್ತೇನೆ
ನಿನ್ನ ಏಕತೆ ಅಖಂಡತೆ
ತುಂಬಿಕೊಂಡಿರುವ ಆಗಾಧ
ಸಿರಿ ಸಂಪತ್ತು
ಆದರೂ ಸರಳ ಸಜ್ಜನತೆಯ ನಡೆ
ನಿನ್ನ ಪ್ರಾಮಾಣಿಕ ತುಡಿತ ಮಿಡಿತ
ಅಬ್ಬರದ ಅಲೆಗಳು
ಸುನಾಮಿ ದಾಳಿ
ಮತ್ತೆ ಮೌನ
ಮುದ ನೀಡುತ್ತದೆ
ನೀನು ತಟವ ಮುತ್ತಿಕ್ಕುವ ಬಗೆ
ನಿನ್ನ ಶಾಂತ ಚಿತ್ತ ವಿಶ್ವ ಪಥ
ನಿನ್ನ ಕನಸುಗಳಿಗೆ
ಜೀವ ಜಾಲ ಸ್ಪಂದನಕ್ಕೆ
ಎಲ್ಲರನೂ ಸಂತೈಸುವ
ಮೇರು ಶಕ್ತಿ ಭೂ ಒಡಲದ ಯುಕ್ತಿ
ಎಲ್ಲೆಡೆ ಪಸರಿಸಲಿ
ನಿನ್ನ ಅಗಾಧ ಸ್ಫೂರ್ತಿ
ಸತ್ಯ ಮಾರ್ಗದ ಮನಕೆ ಪ್ರೀತಿ
ಬರುವ ಸುಂದರ ನಾಳೆಗೆ
ಇರಲಿ ನಿನ್ನ ಸರೋವರದ
ಕಲರವ ತಂಗಾಳಿ ತಂಪು
ನಿನ್ನ ಮೇಲೆ ಹಾರುವ
ಪಕ್ಷಿಗಳ ಇಂಪು
ಕರಗಲಿ ಕರಾಳ ಕತ್ತಲೆ ಯ
ಕಳವಳ ಚಿಂತೆ
ಅದೆಷ್ಟು ಸಹನೆ ತಾಳ್ಮೆ
ನಿನಗೆ ಓ ಕಡಲ ಮಾತೇ
ಎಲ್ಲರ ಸಂತೈಸಿ ಅಪ್ಪಿ
ಒಳಗೊಳಗೇ ಕುದಿವ
ದ್ವೇಷ ಜ್ವಾಲಾ ಮೆಟ್ಟಿ

ಡಾ ಶಾರದಾಮಣಿ ಹುಣಶಾಳ ವಿಜಯಪುರ

Don`t copy text!