ಅಪ್ಪನ ನೆನಪು
ಅಪ್ಪನ ಕಿರು ಬೆರಳು
ಹಿಡಿದು ನಡೆದವಳು
ನನಗೆ ಸ್ಕರ್ಟ್ ರಿಬ್ಬನ್
ಹೊಸ ಬಟ್ಟೆ ಕೊಟ್ಟು
ಕೆನ್ನೆಗೆ ಅಪ್ಪ ಮುತ್ತು
ಕೊಟ್ಟಿದ್ದು ಮುಸುಕು
ಮುಸುಕಿನ ನೆನಪು
ಶಾಲೆಗೆ ಕಳಿಸುವ
ಹಾದಿಯಲಿ ಪೇಪರ್ ಮಿಂಟ್
ಮಿಠಾಯಿ ಕೊಟ್ಟ ಸಿಹಿ
ನನ್ನ ಮದುವೆ ಸಂಭ್ರಮ
ಹಿಗ್ಗಿ ಖುಷಿ ಪಟ್ಟಿದ ಅಪ್ಪ
ಗಂಡನ ಮನೆಗೆ ಹೊರಟು
ನಿಂತಾಗ ಗೊಳೋ ಎಂದು
ಅತ್ತು ಬಿಟ್ಟಿದ್ದ ನನ್ನಪ್ಪ
ನಾನು ನಡೆದೆ ಅವನ
ನೆರಳಿನಲಿ ಅಂದು
ಈಗ ಇಲ್ಲ ಅಪ್ಪ
ನಡೆಯುತ್ತಿರುವೆ
ಅಪ್ಪನ ನೆನಹುವಿನಲಿ
–ರಾಜೇಶ್ವರಿ ಕಬ್ಬೂರ ಧಾರವಾಡ