ಮಾರಾಟಕ್ಕಿವೆ…

ಮಾರಾಟಕ್ಕಿವೆ…

ಮಾರಾಟಕ್ಕಿವೆ
ಪದವಿ ಪ್ರಶಸ್ತಿಗಳು..
ಬೇಕಾದವರು ಬನ್ನಿ
ಹಣವಿದ್ದವರು ಮಾತ್ರ ಬನ್ನಿ..
ಸ್ನಾತಕ, ಸ್ನಾತಕೋತ್ತರ,
ಎಂ.ಫಿಲ್, ಪಿಎಚ್.ಡಿ.
ಯಾವುದು ಬೇಕು..?
ಎಲ್ಲ ಇವೆ ಮಾರಾಟಕ್ಕಿಲ್ಲಿ..
ಓದು-ಬರೆಯಬೇಕಾಗಿಲ್ಲ
ಯಾವುದೇ ಜಂಜಾಟವಿಲ್ಲ
ಆ ಕೈಯಿಂದ ಕೊಟ್ಟು ಹಣ,
ಈ ಕೈಯಿಂದ ತೆಗೆದುಕೊಳ್ಳಿ..
ಪ್ರಶಸ್ತಿ, ಪ್ರಮಾಣಪತ್ರಗಳೂ
ಲಭ್ಯವಿವೆ ಇಲ್ಲಿ…
ಸಾಹಿತಿಗಳ ಹೆಸರಿನಲ್ಲಿ,
ಮಠಾಧೀಶರ ಹೆಸರಿನಲ್ಲಿ,
ಆಯ್ದಕೊಳ್ಳಿ ಬೇಕಾದುದ…
ಇಲ್ಲಿ ಸಲ್ಲುವವು..ಎಲ್ಲಿಯೂ ಸಲ್ಲುವವು
ಹರಾಜಿನಲ್ಲಿಯೂ….!

( ಇಂದಿನ ಸ್ಥಿತಿಯ ನೆನೆದು ಮೂಡಿ ಬಂದ ಕವನ )

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!