ನಿಸರ್ಗದ ಮಧ್ಯೆ
ಪುಟ್ಟ ಪುಟ್ಟ ಪಾತರಗಿತ್ತಿ
ಹುದೋಟದ ವೈಭವ
ಹಾರುತ್ತಿವೆ ಮರ ಗಿಡ
ಬಳ್ಳಿಗಳ ಸುತ್ತ
ಕುಣಿಯುತ್ತಿವೆ ತುಂತುರು
ಮಳೆ ಗುನುಗುಡುವ
ಭೃಂಗದ ಸಂಗೀತ
ಬಣ್ಣ ಬಣ್ಣದ ಹೂವುಗಳಲ್ಲಿ
ಇನ್ನೂ ಅದೆಷ್ಟೋ ಬೆರಗು
ನಿಸರ್ಗ ಸೌಂದರ್ಯದ ಮಧ್ಯೆ
ಹಾರುತ್ತಿವೆ ಚಿತ್ತಾರದ ಪಕ್ಕಗಳ
ಕನಸು ಕಂಗಳ ಗುರಿಯೆಡೆಗೆ
ಹರಿಯದಿರಲಿ ಕನಸು ಭಾವ
ಕರಗದರಲಿ ಇಚ್ಚೆ
ಓ ಸೃಷ್ಟಿಕರ್ತನೇ ನಿನ್ನ
ಶೃಂಗಾರದ ಹುಟ್ಟು ಜೀವಗಳು
ಬದುಕಲಿ ನಿನ್ನ ಪ್ರೀತಿ
ಪ್ರೇಮದ ಹರಕೆ ಹೊತ್ತು
ರಂಗು ರಂಗಿನ ಲೋಕ
ನಿಸರ್ಗದ ಮಧ್ಯೆ
ಮೌನ ಮೆರವಣಿಗೆ
–ಡಾ ಶಾರದಮಣಿ ಹುಣಶಾಳ ವಿಜಯಪುರ